ಮುಖ್ಯಮಂತ್ರಿಯನ್ನು ಭೇಟಿಯಾಗಿ ಮದುವೆಗೆ ಆಹ್ವಾನಿಸಿದ ನಯನತಾರಾ- ಶಿವನ್ - Mahanayaka

ಮುಖ್ಯಮಂತ್ರಿಯನ್ನು ಭೇಟಿಯಾಗಿ ಮದುವೆಗೆ ಆಹ್ವಾನಿಸಿದ ನಯನತಾರಾ- ಶಿವನ್

nayanthara vignesh shivan
05/06/2022

ತಮಿಳುನಾಡು: ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರನ್ನು ತಮ್ಮ ಮದುವೆಗೆ ಆಹ್ವಾನಿಸಲು ನಯನತಾರಾ ಮತ್ತು ವಿಘ್ನೇಶ್ ಶಿವನ್ ಭೇಟಿ ನೀಡಿದ್ದಾರೆ.  ಸ್ಟಾಲಿನ್ ಅವರನ್ನು ತಮ್ಮ ಮದುವೆಗೆ ಆಹ್ವಾನಿಸುತ್ತಿರುವ ತಾರೆಯರ ಫೋಟೋ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದ್ದು, ನಟ ಹಾಗೂ ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಕೂಡ  ಜೊತೆಗಿದ್ದರು.

ಮದುವೆ ಜೂನ್ 9 ರಂದು ನಡೆಯಲಿದ್ದು, ಕೆಲ ದಿನಗಳ ಹಿಂದೆ ಇವರಿಬ್ಬರ ಸೇವ್ ದಿ ಡೇಟ್ ವಿಡಿಯೋ ಬಿಡುಗಡೆಯಾಗಿತ್ತು. ಚೆನ್ನೈ ಸಮೀಪದ ಮಹಾಬಲಿಪುರಂನಲ್ಲಿ ಇವರಿಬ್ಬರ ವಿವಾಹ ನಡೆಯಲಿದೆ.  ಈ ಹಿಂದೆಯೇ ಅವರು ತಿರುಪತಿಯಲ್ಲಿ ಮದುವೆ ಮಾಡಲಿದ್ದಾರೆ ಎಂದು ವರದಿಯಾಗಿತ್ತು. ಆದರೆ ಈಗ ಮದುವೆ  ಚೆನ್ನೈನಲ್ಲಿ ನಡೆಯಲಿದ್ದು, ಮಾಲ್ಡೀವ್ಸ್‌ನಲ್ಲಿ ಸ್ನೇಹಿತರಿಗಾಗಿ ಮದುವೆಯ ರಿಸೆಪ್ಷನ್  ಏರ್ಪಾಡು ಮಾಡಲಾಗಿದೆ ಎಂದು ವರದಿಯಾಗಿದೆ.

ಏಳು ವರ್ಷಗಳ ಪ್ರೇಮದ ನಂತರ ನಯನತಾರಾ ಮತ್ತು ವಿಘ್ನೇಶ್ ಮದುವೆಯಾಗುತ್ತಿದ್ದಾರೆ.  ನಾನು ರೌಡಿತಾನ್ ಚಿತ್ರದ ಸೆಟ್‌ನಲ್ಲಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಪ್ರೀತಿಯು ಚಿಗುರೊಡೆಯಲು ಶುರು ಆಗಿತ್ತು. ಇದೀಗ ಈ ಜೋಡಿ ವಿವಾಹಕ್ಕೆ ಸಿದ್ಧವಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಚಾರ್ಜ್ ಗೆ ಇಟ್ಟಿದ್ದ ಇಲೆಕ್ಟ್ರಿಕ್ ಸ್ಕೂಟರ್ ಬ್ಲಾಸ್ಟ್  

ನೋಟಿನ ಮೇಲೆ ಗಾಂಧೀಜಿ ಜೊತೆಗೆ ಟ್ಯಾಗೋರ್ ಮತ್ತು ಅಬ್ದುಲ್ ಕಲಾಂ ಹೆಸರು!

ಅತ್ಯಾಚಾರಕ್ಕೊಳಗಾದ ಬಾಲಕಿಯ ವಿಡಿಯೋ ಬಿಡುಗಡೆ ಮಾಡಿದ ಬಿಜೆಪಿ ಶಾಸಕ!: ಕಾಂಗ್ರೆಸ್ ಕಿಡಿ

ಕೆಟ್ಟುನಿಂತ 12 ಚಕ್ರದ ಲಾರಿ: ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್

ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತನ ಹತ್ಯೆ ಪ್ರಕರಣದ ಆರೋಪಿ ಬರ್ಬರ ಹತ್ಯೆ!

ಇತ್ತೀಚಿನ ಸುದ್ದಿ