ನಾಯಿಗಾಗಿ ಯುವಕ, ಯುವತಿ ಕಿತ್ತಾಟ | ಯುವಕನೊಂದಿಗೆ ಬಂದ ನಾಯಿ ಹೋಗಿದ್ದು ಯುವತಿಯೊಂದಿಗೆ! - Mahanayaka
10:04 PM Saturday 18 - October 2025

ನಾಯಿಗಾಗಿ ಯುವಕ, ಯುವತಿ ಕಿತ್ತಾಟ | ಯುವಕನೊಂದಿಗೆ ಬಂದ ನಾಯಿ ಹೋಗಿದ್ದು ಯುವತಿಯೊಂದಿಗೆ!

udupi dog
11/04/2021

ಉಡುಪಿ: ನಾಯಿಗಾಗಿ  ಯುವಕ, ಯುವತಿ ಗಲಾಟೆ ನಡೆಸಿದ ಘಟನೆ ಉಡುಪಿ ನಗರದ ಅಜ್ಜರಕಾಡು ಪೆಟ್ ಶಾಪ್ ಬಳಿಯಲ್ಲಿ ನಡೆದಿದ್ದು, ಪೊಲೀಸರು ಮಧ್ಯ ಪ್ರವೇಶಿಸಿದ ಬಳಿಕ ಜಗಳ ಅಂತ್ಯವಾಗಿದೆ.


Provided by

ಯುವಕನೋರ್ವ ತನ್ನ ನಾಯಿಯ ಜೊತೆಗೆ ಅಜ್ಜರಕಾಡು ಪೆಟ್ ಶಾಪ್ ಬಳಿಗೆ ಬಂದಿದ್ದಾನೆ. ಈ ವೇಳೆ ಯುವತಿಯೊಬ್ಬಳು ಈ ಪ್ರದೇಶದಲ್ಲಿದ್ದು, ನಾಯಿಯನ್ನು ಕಂಡು ಯುವಕನ ಬಳಿಗೆ ಬಂದ ಯುವತಿ, ಇದು ನಮ್ಮ ನಾಯಿ ನಿನಗೆ ಹೇಗೆ ಸಿಕ್ಕಿದ್ದು ಎಂದು ಕೇಳಿದ್ದಾಳೆ.

ಈ ವೇಳೆ ಯುವಕ ಇದು ನನ್ನ ನಾಯಿ ಎಂದು ವಾದ ನಡೆಸಿದ್ದಾನೆ. ಆದರೆ, ಈ ನಾಯಿ ನನ್ನದು ಏಳೆಂಟು ತಿಂಗಳಿನಿಂದ ಈ ನಾಯಿ ನಾಪತ್ತೆಯಾಗಿತ್ತು ಎಂದು ಯುವತಿ ಬಲವಾಗಿ ತನ್ನನ್ನು ಸಮರ್ಥಿಸಿಕೊಂಡಿದ್ದಾಳೆ.

ಯುವತಿಯು ನಾಯಿಯ ಹೆಸರನ್ನು ಕರೆದಿದ್ದು, ಈ ವೇಳೆ ನಾಯಿ ಯುವತಿಯ ಬಳಿ ಹೋಗಿ ಆತ್ಮೀಯವಾಗಿ ವರ್ತಿಸಿದೆ. ಯುವಕ-ಯುವತಿಯ ಜಗಳ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಂಧ ಹೊಯ್ಸಳ ಪೊಲೀಸರು, ಸ್ಥಳಕ್ಕೆ ಆಗಮಿಸಿದ್ದು, ರಾಜಿ ಪಂಚಾಯಿಕೆ ನಡೆಸಿದ್ದಾರೆ.

ಯುವತಿಯನ್ನು ಕಂಡೊಡನೆ ನಾಯಿ ಯುವತಿಯ ಜೊತೆಹೆ ಹೋಗಲು ಮನಸ್ಸು ಮಾಡಿದೆ. ಹೀಗಾಗಿ ಅನಿವಾರ್ಯವಾಗಿ ಯುವಕ ಕೈ ಚೆಲ್ಲಿ ಹೋಗಿದ್ದಾನೆ. ಯುವತಿಯ ನಾಯಿ ಯುವಕನಿಗೆ ಹೇಗೆ ಸಿಕ್ಕಿತು ಎನ್ನುವ ಬಗ್ಗೆ ಇನ್ನೂ ತಿಳಿದು ಬಂದಿಲ್ಲ.

ಕ್ಷಣ ಕ್ಷಣದ ಸುದ್ದಿ ಪಡೆಯಲು ಬೆಲ್ ಬಟನ್ ಪ್ರೆಸ್ ಮಾಡಿ

ಇತ್ತೀಚಿನ ಸುದ್ದಿ