ಸ್ಟ್ರಾಂಗ್ ರೂಮ್‌ನ ಸಿಸಿಟಿವಿ ಕ್ಯಾಮೆರಾ 45 ನಿಮಿಷಗಳ ಕಾಲ ಸ್ಥಗಿತ..!

ಮಹಾರಾಷ್ಟ್ರದ ಬಾರಮತಿ ಲೋಕಸಭಾ ಕ್ಷೇತ್ರದಲ್ಲಿ ಇವಿಎಂಗಳನ್ನು ಇಡಲಾಗಿದ್ದ ಸ್ಟ್ರಾಂಗ್ ರೂಮ್ ನ್ ಸಿಸಿಟಿವಿ ಕ್ಯಾಮೆರಾ 45 ನಿಮಿಷಗಳ ಕಾಲ ಸ್ಥಗಿತಗೊಂಡಿರುವುದು ವಿವಾದಕ್ಕೆ ಒಳಗಾಗಿದೆ. ಈ ಬಗ್ಗೆ ಎನ್ ಸಿಪಿ ತೀವ್ರ ಪ್ರತಿಭಟನೆ ಸಲ್ಲಿಸಿದೆ. ಮೇ ಏಳರಂದು ಇಲ್ಲಿ ಮತದಾನ ನಡೆದಿತ್ತು.
ಬಾರಮತಿ ಕ್ಷೇತ್ರವು ಭಾರಿ ಜಿದ್ದಾಜಿದ್ದಿನ ಕ್ಷೇತ್ರವಾಗಿ ಪರಿಣಮಿಸಿದೆ. ಇಲ್ಲಿ ಎನ್ ಸಿಪಿ ಯಿಂದ ಸುಪ್ರಿಯ ಸುಳೆ ಅವರು ಸ್ಪರ್ಧಿಸುತ್ತಿದ್ದಾರೆ.. ಇವರ ವಿರುದ್ಧ ಅಜಿತ್ ಪವಾರ್ ಅವರ ಪತ್ನಿ ಸುನೇತ್ರ ಸ್ಪರ್ಧಿಸುತ್ತಿದ್ದಾರೆ. ಮೇ ಏಳರ ಚುನಾವಣೆಯ ಬಳಿಕ ಎಲ್ಲ ಇವಿಎಂ ಗಳನ್ನು ಕೂಡ ಸ್ಟ್ರಾಂಗ್ ರೂಮ್ ಗೆ ಸ್ಥಳಾಂತರಿಸಲಾಗಿತ್ತು. ಜೂನ್ ನಾಲ್ಕರವರೆಗೆ ಎಲ್ಲ ಇವಿಎಂ ಗಳು ಇಲ್ಲಿ ಇರಲಿವೆ.
ಇವಿಎಂ ಇರುವ ಸ್ಟ್ರಾಂಗ್ ರೂಮ್ ನ ಸಿಸಿಟಿವಿ ಕ್ಯಾಮೆರಾವನ್ನು ಆಫ್ ಮಾಡಿರುವುದು ಆಘಾತಕಾರಿಯಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದರೂ ಅವರ ಉತ್ತರ ತೃಪ್ತಿಕರವಾಗಿಲ್ಲ, ಈ ಬಗ್ಗೆ ಗಂಭೀರ ಅನುಮಾನಗಳು ಇವೆ ಎಂದು ಸುಪ್ರಿಯಾ ಸುಳೆ ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth