ನೀವು ಗಂಡ್ಸು ಎಂಬುದನ್ನು ವಿಡಿಯೊ ಮೂಲಕ ತೋರಿಸಿಕೊಟ್ಟಿದ್ದೀರಿ | ರಮೇಶ್ ಜಾರಕಿಹೊಳಿಗೆ ಚುಚ್ಚಿದ ಕಾಂಗ್ರೆಸ್ ನಾಯಕ - Mahanayaka
11:20 PM Saturday 30 - August 2025

ನೀವು ಗಂಡ್ಸು ಎಂಬುದನ್ನು ವಿಡಿಯೊ ಮೂಲಕ ತೋರಿಸಿಕೊಟ್ಟಿದ್ದೀರಿ | ರಮೇಶ್ ಜಾರಕಿಹೊಳಿಗೆ ಚುಚ್ಚಿದ ಕಾಂಗ್ರೆಸ್ ನಾಯಕ

m laxman
28/03/2021


Provided by

ಮೈಸೂರು: ರಮೇಶ್ ಜಾರಕಿಹೊಳಿ ಅವರು ಗಂಡಸು ಎನ್ನುವುದು ವಿಡಿಯೋ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌, ರಮೇಶ್ ಜಾರಕಿಹೊಳಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ನಗರದಲ್ಲಿ ಭಾನುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನೊಬ್ಬ ಗಂಡ್ಸು ಅಂತ ಆರು ಬಾರಿ ಹೇಳಿಕೊಳ್ಳುತ್ತೀರಿ. ಗಂಡಸುತನ ತೋರಿಸಲು ಹೋಗಿಯೇ ನೀವು ಸಿಕ್ಕಿಹಾಕಿಕೊಂಡಿದ್ದೀರಿ. ನೀವು ಗಂಡ್ಸು ಎಂಬುದನ್ನು ವಿಡಿಯೊ ಮೂಲಕ ತೋರಿಸಿಕೊಟ್ಟಿದ್ದೀರಿ ಎಂದು ಲಕ್ಷ್ಮಣ್ ತಿವಿದರು.

ನಿಮ್ಮ ರೌಡಿಸಂ ಏನಿದ್ದರೂ ನಿಮ್ಮ ಊರಿನಲ್ಲಿ ಇಟ್ಟುಕೊಳ್ಳಿ ಬೆಂಗಳೂರಿನಲ್ಲಿ ಅದನ್ನು ತೋರಿಸಬೇಡಿ. ನೀವು ಬಳಸುವ ಪದ ನಿಮ್ಮ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಲಕ್ಷ್ಮಣ್ ಇದೇ ಸಂದರ್ಭ ಆಕ್ರೋಶ ವ್ಯಕ್ತಪಡಿಸಿದರು.

ಇನ್ನೂ ರೇಣುಕಾಚಾರ್ಯ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ ಅವರು, ರೇಣುಕಾಚಾರ್ಯ ನೀರು ಇಲ್ಲದೆ ಎಲ್ಲರ ಮೇಲೆ ಬೋಟ್ ಓಡಿಸುವ ವ್ಯಕ್ತಿ. 2009ರಲ್ಲಿ ನರ್ಸ್ ಕಥೆ ಏನಾಯ್ತು? ಲೈಂಗಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಮ್ಮದು 17 ಜನರ ಕಥೆ ನಮ್ಮ ಬಳಿ ಇದೆ ಎಂದು ಹೇಳಿದರು.

ಇತ್ತೀಚಿನ ಸುದ್ದಿ