ನೆಹರೂ ಲೈಬ್ರೆರಿ ಇನ್ಮುಂದೆ ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯ..! ಇದರ ಹಿಂದಿರೋ ಉದ್ದೇಶ ಏನ್ ಗೊತ್ತಾ..? - Mahanayaka
3:06 AM Wednesday 20 - August 2025

ನೆಹರೂ ಲೈಬ್ರೆರಿ ಇನ್ಮುಂದೆ ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯ..! ಇದರ ಹಿಂದಿರೋ ಉದ್ದೇಶ ಏನ್ ಗೊತ್ತಾ..?

16/06/2023


Provided by

ದಿಲ್ಲಿಯಲ್ಲಿರುವ ನೆಹರೂ ಮೆಮೊರಿಯಲ್ ಮ್ಯೂಸಿಯಂ ಆ್ಯಂಡ್ ಲೈಬ್ರರಿಯನ್ನು ಪ್ರಧಾನಮಂತ್ರಿ ಮ್ಯೂಸಿಯಂ ಆ್ಯಂಡ್ ಸೊಸೈಟಿಯಾಗಿ ಮರು ನಾಮಕರಣ ಮಾಡಲಾಗಿದೆ. ನೆಹರೂ ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯವನ್ನು ಇನ್ನು ಮುಂದೆ ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯ ಎಂದು ಕರೆಯಲಾಗುತ್ತದೆ.

ಈ ಕಟ್ಟಡವು ಬ್ರಿಟಿಷ್ ಆಳ್ವಿಕೆಯಲ್ಲಿ ಭಾರತದ ಕಮಾಂಡರ್ ಇನ್ ಚೀಫ್ ಅವರ ಅಧಿಕೃತ ನಿವಾಸವಾಗಿತ್ತು. 1948 ರಲ್ಲಿ ಪಂಡಿತ್ ನೆಹರು ದೇಶದ ಪ್ರಧಾನಿಯಾದಾಗ, ಈ ಭವನವು ಅವರ ಅಧಿಕೃತ ನಿವಾಸವಾಗಿತ್ತು. ಪಂಡಿತ್ ನೆಹರೂ 16 ವರ್ಷಗಳ ಕಾಲ ಇದೇ ಮನೆಯಲ್ಲಿ ವಾಸವಾಗಿದ್ದು ಇಲ್ಲಿಯೇ ಇಹಲೋಕ ತ್ಯಜಿಸಿದ್ದರು.

ಅದರ ನಂತರ, ಈ ಭವನವನ್ನು ಪಂಡಿತ್ ನೆಹರೂ ಅವರ ನೆನಪಿಗಾಗಿ ಸಮರ್ಪಿಸಲಾಯಿತು ಮತ್ತು ಪಂಡಿತ್ ನೆಹರೂ ವಸ್ತುಸಂಗ್ರಹಾಲಯ ಮತ್ತು ಸ್ಮಾರಕ ಎಂದು ಕರೆಯಲಾಯಿತು.
ಇದೀಗ ಕೇಂದ್ರ ಸರ್ಕಾರ ನೆಹರು ಸ್ಮಾರಕದಿಂದ ಪಿಎಂ ಮ್ಯೂಸಿಯಂ ಮತ್ತು ಸೊಸೈಟಿ ಎಂದು ಹೆಸರು ಬದಲಿಸಿದೆ.

ಕಳೆದ 59 ವರ್ಷಗಳಿಂದ ನೆಹರೂ ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯವು ಜಾಗತಿಕ ಬೌದ್ಧಿಕ ಕೇಂದ್ರವಾಗಿದೆ ಮತ್ತು ಪುಸ್ತಕಗಳ ಭಂಡಾರವಾಗಿದೆ.

ದೇಶಕ್ಕೆ ಪಂಚವಾರ್ಷಿಕ ಯೋಜನೆಗಳನ್ನು ರೂಪಿಸುವ ಕೆಲಸವನ್ನು ಯೋಜನಾ ಆಯೋಗ ಮಾಡುತ್ತಿತ್ತು. ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ಕೂಡಲೇ ಯೋಜನಾ ಆಯೋಗದ ಹೆಸರನ್ನು ಬದಲಾಯಿಸುವುದಾಗಿ ಘೋಷಿಸಿದ್ದರು. 2014 ರಲ್ಲಿ, ಯೋಜನಾ ಆಯೋಗವನ್ನು ನೀತಿ ಆಯೋಗ್ ಎಂದು ಮರುನಾಮಕರಣ ಮಾಡಲಾಯಿತು.

ರೇಸ್ ಕೋರ್ಸ್ ಲೋಕ ಕಲ್ಯಾಣ ಮಾರ್ಗ ಪ್ರಧಾನ ಮಂತ್ರಿಯವರ ನಿವಾಸವನ್ನು ಮೊದಲು ಸೆವೆನ್ ರೇಸ್ ಕೋರ್ಸ್ (7 ಆರ್‌ಸಿಆರ್) ಎಂದು ಕರೆಯಲಾಗುತ್ತಿತ್ತು, ಆದರೆ ಮೋದಿ ಸರ್ಕಾರವು 2016 ರಲ್ಲಿ ಅದರ ಹೆಸರನ್ನು ಲೋಕ ಕಲ್ಯಾಣ ಮಾರ್ಗ ಎಂದು ಬದಲಾಯಿಸಿತು.

ಔರಂಗಜೇಬ್ ರಸ್ತೆಯ ಹೆಸರನ್ನೂ ಕೂಡಾ ಬದಲಾಯಿಸಲಾಗಿದೆ. ಇಷ್ಟು ಮಾತ್ರವಲ್ಲದೆ ದೆಹಲಿಯ ಔರಂಗಜೇಬ್ ರಸ್ತೆಗೆ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಹೆಸರನ್ನು ಮೋದಿ ಸರ್ಕಾರ ಮರುನಾಮಕರಣ ಮಾಡಿತ್ತು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ