ನೇಜಾರು ನಾಲ್ವರ ಕೊಲೆ ಪ್ರಕರಣ: 5 ತಂಡಗಳಿಂದ ಎಲ್ಲಾ ಕೋನಗಳಿಂದಲೂ ವಿಚಾರಣೆ

13/11/2023
ಉಡುಪಿ: ನೇಜಾರು ನಾಲ್ವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಎಲ್ಲಾ 5 ತಂಡಗಳು ಎಲ್ಲಾ ಕೋನಗಳಿಂದ ವಿಚಾರಣೆ ನಡೆಸುತ್ತಿವೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ತಿಳಿಸಿದ್ದಾರೆ.
ಈ ಪೊಲೀಸ್ ತಂಡಗಳು ಸಂಬಂಧಿಕರು, ಸ್ನೇಹಿತರು, ಪರಿಚಿತರನ್ನು ವಿಚಾರಣೆ ನಡೆಸುತ್ತಿವೆ. ತಾಂತ್ರಿಕ ತಂಡಗಳು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಗಾಗಿ ಶೋಧ ಕಾರ್ಯ ನಡೆಸುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.