ಗ್ರಂಥಾಲಯ ಮೇಲ್ವಿಚಾರಕರ ನೇಮಕಾತಿಗಾಗಿ ಅರ್ಜಿ ಆಹ್ವಾನ - Mahanayaka
11:01 AM Tuesday 9 - December 2025

ಗ್ರಂಥಾಲಯ ಮೇಲ್ವಿಚಾರಕರ ನೇಮಕಾತಿಗಾಗಿ ಅರ್ಜಿ ಆಹ್ವಾನ

03/02/2021

ಹಾಸನ: ಜಿಲ್ಲೆಯ ಸಕಲೇಶಪುರ ತಾಲ್ಲೂಕು ಬಾಳ್ಳುಪೇಟೆ ಗ್ರಾಮ ಪಂಚಾಯಿತಿ ಗ್ರಂಥಾಲಯ(3ಎ,ಮಹಿಳಾ) ಹಾಗೂ ಬೇಲೂರು ತಾಲ್ಲೂಕು ಅಡಗೂರು ಗ್ರಾಮ ಪಂಚಾಯಿತಿ ಗ್ರಂಥಾಲಯ (ಸಾಮಾನ್ಯ) ಮೇಲ್ವಿಚಾರಕರನ್ನು ಮಾಸಿಕ ರೂ. 7,000 ಗೌರವ ಸಂಭಾವನೆ ಆಧಾರದ ಮೇಲೆ ನೇಮಕಾತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆಯಾ ಪಂಚಾಯಿತಿ ಸ್ಥಳೀಯ ನಿವಾಸಿಗಳಾಗಿರತಕ್ಕದ್ದು ಹಾಗೂ ಕನಿಷ್ಟ ಎಸ್.ಎಸ್.ಎಲ್.ಸಿ ಪಾಸಾಗಿರಬೇಕು ಮತ್ತು ಆಯಾ ಪಂಚಾಯಿತಿಗಳಿಗೆ ನಿಗದಿಪಡಿಸಿದ ಮೀಸಲಾತಿಗೆ ಸೇರಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲ್ಲಿಸಬಹುದು. ಅರ್ಜಿ ಹಾಗೂ ಇತರೆ ದಾಖಾಲಾತಿಗಳನ್ನು ಪಂಚಾಯಿತಿಗೆ ಸಲ್ಲಿಸಲು ಕೊನೆಯ ಫೆ.25 ಅರ್ಜಿ ನಮೂನೆಯನ್ನು ಆಯಾ ಪಂಚಾಯಿತಿ ಕಾರ್ಯಾಲಯಗಳಲ್ಲಿ ಪಡೆದುಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಗ್ರಾಮ ಪಂಚಾಯಿತಿ ಕಾರ್ಯಲಯ ಅಥವಾ ಉಪನಿರ್ದೇಶಕರ ಕಚೇರಿ ದೂ.ಸಂ.08172-268608, ಜಿಲ್ಲಾ ಕೇಂದ್ರ ಗ್ರಂಥಾಲಯ ಇವರನ್ನು ಸಂಪರ್ಕಿಸಬಹುದು.

ಇತ್ತೀಚಿನ ಸುದ್ದಿ