ನಿಂಬೆ ಹಣ್ಣಿಗೆ ಕೆ.ಜಿಗೆ 300: ಕೇಂದ್ರ ಸರ್ಕಾರವನ್ನು ತರಾಟೆಗೆತ್ತಿಕೊಂಡ ಸಚಿನ್ ಪೈಲಟ್ - Mahanayaka

ನಿಂಬೆ ಹಣ್ಣಿಗೆ ಕೆ.ಜಿಗೆ 300: ಕೇಂದ್ರ ಸರ್ಕಾರವನ್ನು ತರಾಟೆಗೆತ್ತಿಕೊಂಡ ಸಚಿನ್ ಪೈಲಟ್

sachin
13/05/2022


Provided by

ದೆಹಲಿ ;ಕೇಂದ್ರ ಸರ್ಕಾರ ಜನರ ಭಾವನೆಗಳೊಂದಿಗೆ ಆಟವಾಡುವುದನ್ನು ಬಿಟ್ಟು ಹಣದುಬ್ಬರ ತಡೆಗೆ ಕ್ರಮಕೈಗೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡ ಸಚಿನ್ ಪೈಲಟ್ ಆಗ್ರಹಿಸಿದ್ದಾರೆ.

ನಿಂಬೆ ಹಣ್ಣಿನ ಬೆಲೆ ಕೆಜಿಗೆ 300 ರೂ.ಗೆ ಏರಿದೆ.  ಅಡುಗೆ ಅನಿಲ ಬೆಲೆ ಸಾವಿರ ರೂ ದಾಟಿದೆ. ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದ್ದರೂ ಕೇಂದ್ರ ಸರಕಾರ ಕಣ್ಣು ಮುಚ್ಚಿ ಕುಳಿತಿದೆ.  ಅಲ್ಲದೆ ಜನರ ಸಮಸ್ಯೆಗಳನ್ನು ಪರಿಹರಿಸದೆ ಕೇಂದ್ರ ಸರ್ಕಾರವು ಜನರಿಂದ ಓಡಿಹೋಗಲು ಯತ್ನಿಸುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇವಲ ಜನರ ಭಾವನೆಯೊಂದಿಗೆ ರಾಜಕೀಯ ಮಾಡಿ ಮತ ಪಡೆಯಲು ಸಾಧ್ಯವಿಲ್ಲ.  ಎನ್‌ ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಅವರು ಸರ್ಕಾರದ ಕ್ರಮಗಳು ದೇಶಕ್ಕೆ ಹಾನಿಕರ ಎಂದು ಎಚ್ಚರಿಸಿದ್ದಾರೆ.  ಕೇಂದ್ರವು ಜನರ ಸಮಸ್ಯೆಗಳನ್ನು ಬಗೆಹರಿಸುವ ಬದಲು ಕೋಮುಗಲಭೆ ಸೃಷ್ಟಿಸಿ ಗಮನ ಬೇರೆಡೆ ಸೆಳೆಯಲು ಯತ್ನಿಸುತ್ತಿದೆ.  ಇದು ಖಂಡನೀಯ ಎಂದು ಪೈಲಟ್ ಹೇಳಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬೆಂಗಳೂರು ಡೇಸ್  ಖ್ಯಾತಿಯ ನತಾಶಾ ನಾಯಿಮರಿ ಇನ್ನು ಕೇವಲ ನೆನಪು ಮಾತ್ರ

ರಾಜ್ಯದ ಎಲ್ಲ ನಗರಗಳಲ್ಲಿ “ನಮ್ಮ ಕ್ಲಿನಿಕ್ “ಸ್ಥಾಪನೆ ಸಿಎಂ ಬೊಮ್ಮಾಯಿ

ನಟಿ ಮತ್ತು ರೂಪದರ್ಶಿ ನಿಗೂಢ ಸ್ಥಿತಿಯಲ್ಲಿ ಸಾವು;  ಪತಿ ಬಂಧನ

ಎಸೆಸೆಲ್ಸಿ ಪರೀಕ್ಷೆ ಫಲಿತಾಂಶ ಯಾವಾಗ?:  ದಿನಾಂಕ ಘೋಷಣೆ

ತಂದೆ ಕರೆನ್ಸಿ ಹಾಕಲಿಲ್ಲ ಎಂದು ಖಾಸಗಿ ಭಾಗಕ್ಕೆ ತ್ರಿಶೂಲದಿಂದ ಚುಚ್ಚಿಕೊಂಡ ಯುವಕ!

 

ಇತ್ತೀಚಿನ ಸುದ್ದಿ