ನೆರೆ ಮನೆಯ ಮಹಿಳೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಕ್ಕೆ 11 ವರ್ಷದ ಬಾಲಕಿ ಆತ್ಮಹತ್ಯೆ! - Mahanayaka

ನೆರೆ ಮನೆಯ ಮಹಿಳೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಕ್ಕೆ 11 ವರ್ಷದ ಬಾಲಕಿ ಆತ್ಮಹತ್ಯೆ!

10/03/2021


Provided by

ಮುಂಬೈ: ಮನೆಯ ಮುಂದೆ ಕಸ ಹಾಕಿದ ವಿಚಾರಕ್ಕಾಗಿ ನೆರೆಯ ಮನೆಯ ಮಹಿಳೆಯೋರ್ವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಇದರಿಂದ ತೀವ್ರವಾಗಿ ನೊಂದ 11 ವರ್ಷ ವಯಸ್ಸಿನ ಬಾಲಕಿಯೋರ್ವಳು ಆತ್ಮಹತ್ಯೆಗೆ ಶರಣಾದ ಘಟನೆ ಮುಂಬೈನಲ್ಲಿ ನಡೆದಿದೆ.

ಮಾರ್ಚ್ 6ರಂದು ಬೆಳಗ್ಗೆ  ಕಸ ಹಾಕುವ ವಿಚಾರದಲ್ಲಿ ಬಾಲಕಿಗೆ ನೆರೆಯ ಮನೆಯವಳು ಅಸಭ್ಯ ಪದಗಳನ್ನು ಬಳಸಿ ಬೈದಿದ್ದಾಳೆ. ಇದರಿಂದ ತೀವ್ರವಾಗಿ ನೊಂದ ಬಾಲಕಿ  ಅಂದೇ ಮಧ್ಯಾಹ್ನ ನೇಣಿಗೆ ಶರಣಾಗಿದ್ದಾಳೆ.

ಘಟನೆಯ ಬಗ್ಗೆ ಟ್ರಾಂಬೆ  ಪೊಲೀಸರಿಗೆ ಮುಂಬೈ ಮನ್ ಖುರ್ದ್ ಪ್ರದೇಶದ ಭೀಮ ನಗರ ನಿವಾಸಿಯಾಗಿರುವ ಸಂತ್ರಸ್ತ ಬಾಲಕಿಯ ತಾಯಿ ದೂರು ನೀಡಿದ್ದಾರೆ. ತನ್ನ ಮಗಳನ್ನು ತೀವ್ರವಾಗಿ ನಿಂದಿಸಿ, ಕೊಂದು ಬಿಡುವುದಾಗಿ ನೆರೆಯ ಮನೆಯಾಕೆ ಬೈದಿದ್ದಾಳೆ. ಇದರಿಂದ ನೊಂದ ಆಕೆ ಬಹಳಷ್ಟ ಹೊತ್ತು ಅಳುತ್ತಿದ್ದಳು. ತಾನು ಮಧ್ಯಾಹ್ನದ ವೇಳೆಗೆ ತನ್ನ ಸಂಬಂಧಿಕರ ಮನೆಗೆ ಹೋಗಿ ವಾಪಸ್ ಆಗುವ ವೇಳೆ ಆಕೆ ನೇಣಿಗೆ ಶರಣಾಗಿದ್ದಾಳೆ ಎಂದು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಇನ್ನೂ ಘಟನೆ ಸಂಬಂಧ ತಾಯಿಯ ದೂರಿನನ್ವಯ ನೆರೆಯ ಮನೆಯ ಮಹಿಳೆಯ ವಿರುದ್ಧ ನಿಂದನೆ ಮತ್ತು ಆತ್ಮಹತ್ಯೆಗೆ ಪ್ರೇರಣೆ ನೀಡಿದ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿ