ಇಸ್ರೇಲ್‌ನಲ್ಲಿ ರಕ್ಷಣಾ ಸಚಿವರ ಪದಚ್ಯುತಿ: ಪ್ರಧಾನಿ ನೆತನ್ಯಾಹು ವಿರುದ್ಧ ಇಸ್ರೇಲಿಗರಿಂದಲೇ ಆಕ್ರೋಶ - Mahanayaka
5:29 AM Wednesday 20 - August 2025

ಇಸ್ರೇಲ್‌ನಲ್ಲಿ ರಕ್ಷಣಾ ಸಚಿವರ ಪದಚ್ಯುತಿ: ಪ್ರಧಾನಿ ನೆತನ್ಯಾಹು ವಿರುದ್ಧ ಇಸ್ರೇಲಿಗರಿಂದಲೇ ಆಕ್ರೋಶ

06/11/2024


Provided by

ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರು ತನ್ನ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರನ್ನು ಸಚಿವ ಸ್ಥಾನದಿಂದ ಹೊರದಬ್ಬಿದ್ದಾರೆ. ಇದು ಇಸ್ರೇಲ್ ನಲ್ಲಿ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದ್ದು ಸಾವಿರಾರು ಮಂದಿ ಬೀದಿಗಿಳಿದು ಪ್ರತಿಭಟಿಸಿದ್ದಾರೆ. ಟೆಲ್ ಅವಿವ್, ಜೆರುಸಲೇಮ್, ಹೈಫಾ ಸಿಸೇರಿಯ ಮುಂತಾದ ಪ್ರಮುಖ ನಗರಗಳಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಪ್ರತಿಭಟಿಸಿದ್ದಾರೆ, ಮಾತ್ರ ಅಲ್ಲ ನೆತನ್ಯಾಹು ಅವರನ್ನು ದೇಶದ್ರೋಹಿ ಎಂದು ಪ್ರತಿಭಟನಾಕಾರರು ಕರೆದಿದ್ದಾರೆ.

ಈ ಪ್ರತಿಭಟನೆಯಲ್ಲಿ ಹಮಾಸ್ ಬಳಿ ಒತ್ತೆಯಾಳುಗಳಾಗಿ ಉಳಿದಿರುವ ಕುಟುಂಬದ ಸದಸ್ಯರೂ ಭಾಗವಹಿಸಿದ್ದಾರೆ.
ನೆತನ್ಯಾಹು ಅವರ ಈ ನಿರ್ಧಾರವನ್ನು ವಿರೋಧಪಕ್ಷಗಳು ಮತ್ತು ಹಲವಾರು ಸಂಘ ಸಂಸ್ಥೆಗಳು ಖಂಡಿಸಿವೆ. ದೇಶದ ಸುರಕ್ಷತೆಯನ್ನು ಕಾಪಾಡಬೇಕಾದ ಈ ಸಂದರ್ಭದಲ್ಲಿ ನೆತನ್ಯಾಹು ರಾಜಕೀಯ ಆಟ ಆಟವಾಡುತ್ತಿದ್ದಾರೆ,, ಇದರ ವಿರುದ್ಧ ಜನರು ಪ್ರತಿಭಟಿಸಬೇಕು ಎಂದು ಪ್ರತಿಪಕ್ಷ ನಾಯಕರು ಕರೆ ನೀಡಿದ್ದಾರೆ. ಇದು ಹುಚ್ಚು ನಿರ್ಧಾರ ಎಂದು ಪ್ರತಿಪಕ್ಷ ನಾಯಕ ಆರೋಪಿಸಿದ್ದಾರೆ.

ಇದೇ ವೇಳೆ ಗ್ಯಾಲೆಂಟ್ ಅವರನ್ನು ನೆತನ್ಯಾಹು ಹೊರ ಹಾಕುತ್ತಿರುವುದು ಇದು ಮೊದಲಲ್ಲ. 2023ರಲ್ಲಿ ಅವರು ಇದೇ ರೀತಿಯಲ್ಲಿ ಅವರನ್ನು ಸಂಪುಟದಿಂದ ಹೊರ ಹಾಕಿದ್ದರು. ಆಗ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಉಂಟಾಗಿತ್ತು. ಎರಡು ವಾರಗಳ ಬಳಿಕ ಮತ್ತೆ ಅವರು ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸಿದ್ದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ