ಮೋದಿ ಸ್ಟೈಲಿಗೆ ನೆಟ್ಟಿಗರು ಫಿದಾ: ಸಫಾರಿ ಫೋಟೋಗಳು ಭಾರೀ ವೈರಲ್ - Mahanayaka

ಮೋದಿ ಸ್ಟೈಲಿಗೆ ನೆಟ್ಟಿಗರು ಫಿದಾ: ಸಫಾರಿ ಫೋಟೋಗಳು ಭಾರೀ ವೈರಲ್

modis style
09/04/2023


Provided by

ಚಾಮರಾಜನಗರ: ಬಂಡೀಪುರದಲ್ಲಿ ಸಫಾರಿ ನಡೆಸಲು ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ಹೊಸ ಲುಕ್ ನೆಟ್ಟಿಗರ ಮನ ಸೂರೆಗೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ಲಾಗುತ್ತಿದೆ.

ಹೌದು,,, ನರೇಂದ್ರ ಮೋದಿ ಮತ್ತೇ ತಮ್ಮ ಲುಕ್ಕಿನಿಂದ ನೆಟ್ಟಿಗರ ಗಮನ ಸೆಳೆದಿದ್ದು  ಖಾಕಿ ಬಣ್ಣದ ಪ್ಯಾಂಟ್, ಕಪ್ಪು ಬಣ್ಣದ ಹ್ಯಾಟ್, ಗಾಗಲ್ಸ್, ಟೀ ಶರ್ಟ್ ಹಾಗೂ ಅರಣ್ಯ ಇಲಾಖೆ ಜಾಕೆಟ್ ಧರಿಸಿ ಎಂಟ್ರಿ ಕೊಟ್ಟ ಸ್ಟೈಲು ಮತ್ತೇ ಟಾಕ್ ಆಫ್ ದಿ ಸೋಷಿಯಲ್ ಮೀಡಿಯಾ ಆಗಿದ್ದು ಮೋದಿ ಅವರ ಸ್ಟೈಲಿಗೆ ಜನರು ಫಿಧಾ ಆಗಿದ್ದಾರೆ.

ತಮ್ಮ ಅಪಿಯರೆನ್ಸ್ ಬಗ್ಗೆ ಹೆಚ್ಚು ಗಮನ ಹರಿಸುವ ಮೋದಿ ಮತ್ತೇ ತಮ್ಮ ಎನರ್ಜಿಟಿಕ್ ಲುಕ್ಕಿನ ಮೂಲಕ ಅಭಿಮಾನಿಗಳಲ್ಲಿ ಹುಚ್ಚೆಬ್ಬಿಸಿದ್ದರೆ. ಬಂಡೀಪುರಕ್ಕೆ ಬರುವ ಮುನ್ನ ಕೈಯಲ್ಲಿ ಜಾಕೆಟ್ ಹಿಡಿದು ಬರುವುದು ಹಾಗೂ ಬೋಳಗುಡ್ಡದಲ್ಲಿ ಬೈನಾಕುಲರ್ ನಲ್ಲಿ ಕಾಡಿನ ವೀಕ್ಷಣೆ,  ಹುಲಿ ಚಿತ್ರದ ಜೊತೆ ಫೋಟೋಗೆ ಪೋಸ್ ನ ಸ್ಟೈಲಿಶ್ ಚಿತ್ರಗಳು ವೈರಲ್ಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ