ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ನೂತನ ಗೌರವ ಕಾರ್ಯದರ್ಶಿಯಾಗಿ ಡಾ. ಗಣನಾಥ ಎಕ್ಕಾರು ನೇಮಕ - Mahanayaka
1:19 PM Wednesday 17 - September 2025

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ನೂತನ ಗೌರವ ಕಾರ್ಯದರ್ಶಿಯಾಗಿ ಡಾ. ಗಣನಾಥ ಎಕ್ಕಾರು ನೇಮಕ

Gananath Ekkaru
02/09/2023

 ಭಾರತೀಯ ರೆಡ್ ಕ್ರಾಸ್ ಉಡುಪಿ ಘಟಕದ ನೂತನ ಗೌರವ ಕಾರ್ಯದರ್ಶಿ ನಿವೃತ್ತ ರಾಜ್ಯ ಎನ್. ಎಸ್, ಎಸ್ ಅಧಿಕಾರಿ ಮತ್ತು ಸರಕಾರದ ಜಂಟಿ ಕಾರ್ಯದರ್ಶಿಯಾಗಿದ್ದ ಡಾ. ಗಣನಾಥ ಎಕ್ಕಾರು ಅವರನ್ನು ನೇಮಿಸಲಾಗಿದೆ.
ಉಡುಪಿ ಅವರು ಗೌರವ ಕಾರ್ಯದರ್ಶಿಯಾಗಿ ದಿನಾಂಕ 01.09.2023 ರಿಂದ ಅಧಿಕಾರ ಸ್ವೀಕರಿಸಿದ್ದಾರೆ
ಹಾಗೂ ಜಿಲ್ಲಾ ವಿಕಲ ಚೇತನರ ಪುನರ್ವಸತಿ ಕೇಂದ್ರದ ಸದಸ್ಯ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಲಿದ್ದಾರೆ.
ಡಾ. ಎಕ್ಕಾರು ಅವರು ಕಾವೂರು ಮತ್ತು ತೆಂಕನಿಡಿಯೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಮಂಗಳೂರು ವಿಶ್ವ ವಿದ್ಯಾನಿಲಯದ ಎನ್.ಎಸ್.ಎಸ್ ಸಂಯೋಜನಾಧಿಕಾರಿಯಾಗಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸರಕಾರದ ಯುವ ಸಬಲೀಕರಣ ಇಲಾಖೆಯಲ್ಲಿ ರಾಜ್ಯ ಎನ್. ಎಸ್. ಎಸ್ ಅಧಿಕಾರಿ ಮತ್ತು ಸರಕಾರದ ಪದನಿಮಿತ್ತ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಚಿಂತಕರಾಗಿ ಲೇಖಕರಾಗಿ ಗುರುತಿಸಿಕೊಂಡಿದ್ದಾರೆ

ಇತ್ತೀಚಿನ ಸುದ್ದಿ