ಬ್ಯಾನ್: ಮಾಂಸ, ಮೊಟ್ಟೆಗಳ ಬಹಿರಂಗ ಮಾರಾಟದ ನಿಷೇಧಕ್ಕೆ ಮಧ್ಯಪ್ರದೇಶ ಸರ್ಕಾರ ನಿರ್ಧಾರ: ಧ್ವನಿವರ್ಧಕಗಳ ಬಳಕೆಗೂ ನಿರ್ಬಂಧ

ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿ ಮೋಹನ್ ಯಾದವ್ ಅವರ ಮೊದಲ ಆದೇಶವೆಂದರೆ ರಾಜ್ಯಾದ್ಯಂತ ಮೊಟ್ಟೆ ಮತ್ತು ಮಾಂಸದ ಮುಕ್ತ ಮಾರಾಟವನ್ನು ನಿಷೇಧಿಸುವುದು..! ಹೌದು.
ಬುಧವಾರ ಅಧಿಕಾರ ವಹಿಸಿಕೊಂಡ ಯಾದವ್, ತಮ್ಮ ಕ್ಯಾಬಿನೆಟ್ ನ ಮೊದಲ ಸಭೆಯ ನಂತರ ಈ ಘೋಷಣೆ ಮಾಡಿದ್ದಾರೆ.
“ಆಹಾರ ಸುರಕ್ಷತಾ ನಿಯಮಗಳ ಅನುಷ್ಠಾನದ ನಂತರ, ಬಹಿರಂಗವಾಲ್ಲಿ ಮಾಂಸ ಮತ್ತು ಮೀನು ಮಾರಾಟದ ಬಗ್ಗೆ ಭಾರತ ಸರ್ಕಾರವು ಮಾರ್ಗಸೂಚಿಗಳನ್ನು ಹೊರಡಿಸಿದೆ. ಅವುಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುವುದು” ಎಂದು ಸಿಎಂ ಯಾದವ್ ಹೇಳಿದರು.
ಡಿಸೆಂಬರ್ 15 ರಿಂದ 31 ರವರೆಗೆ ಮಾಂಸ ಮತ್ತು ಮೀನುಗಳ ಮುಕ್ತ ಮಾರಾಟದ ನಿಷೇಧವನ್ನು ಜಾರಿಗೆ ತರಲು ಆಹಾರ ಇಲಾಖೆ, ಪೊಲೀಸ್ ಮತ್ತು ಸ್ಥಳೀಯ ನಗರ ಸಂಸ್ಥೆಗಳನ್ನು ಒಳಗೊಂಡ ಅಭಿಯಾನವನ್ನು ಪ್ರಾರಂಭಿಸಲಾಗುವುದು ಎಂದು ಸಿಎಂ ಹೇಳಿದ್ದಾರೆ.
ಮೊದಲ ಕ್ಯಾಬಿನೆಟ್ ಸಭೆಯಲ್ಲಿ ತೆಗೆದುಕೊಂಡ ಮತ್ತೊಂದು ನಿರ್ಧಾರವೆಂದರೆ, ಧಾರ್ಮಿಕ ಸ್ಥಳಗಳಲ್ಲಿ ಅನುಮತಿಸಲಾದ ಡೆಸಿಬೆಲ್ ಮಟ್ಟವನ್ನು ಮೀರಿ ಧ್ವನಿವರ್ಧಕಗಳ ಬಳಕೆಯನ್ನು ನಿಷೇಧಿಸಿ ನಿರ್ದೇಶನ ಹೊರಡಿಸುವುದು ಆಗಿದೆ.
ಸುಪ್ರೀಂ ಕೋರ್ಟ್ ಮತ್ತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಆದೇಶಗಳ ಆಧಾರದ ಮೇಲೆ ಧ್ವನಿವರ್ಧಕಗಳ ಬಳಕೆಗೆ ಮಾರ್ಗಸೂಚಿಗಳನ್ನು ಸಹ ತಕ್ಷಣದ ಅನುಷ್ಠಾನಕ್ಕಾಗಿ ಹೊರಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.