ಕೊವಿಡ್ ನಿಯಮ: ತನ್ನ ಮದುವೆಯನ್ನೇ ರದ್ಧುಗೊಳಿಸಿದ ನ್ಯೂಜಿಲೆಂಡ್‌ ಪ್ರಧಾನಿ - Mahanayaka

ಕೊವಿಡ್ ನಿಯಮ: ತನ್ನ ಮದುವೆಯನ್ನೇ ರದ್ಧುಗೊಳಿಸಿದ ನ್ಯೂಜಿಲೆಂಡ್‌ ಪ್ರಧಾನಿ

jacinda ardern
23/01/2022


Provided by

ವೆಲ್ಲಿಂಗ್ಟನ್‌:  ಓಮೈಕ್ರಾನ್‌ ಪ್ರಕರಣಗಳು ಹೆಚ್ಚಿದಂತೆ ಕೋವಿಡ್‌ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದ್ದು, ನ್ಯೂಜಿಲೆಂಡ್‌ನ ಪ್ರಧಾನಿ ಜೆಸಿಂದಾ ಆರ್ಡೆನ್‌ ತನ್ನ ಮದುವೆಯನ್ನೇ ರದ್ಧುಗೊಳಿಸಿರುವುದಾಗಿ ಭಾನುವಾರ ಸ್ಪಷ್ಟಪಡಿಸಿದ್ದಾರೆ.

ನನ್ನ ವಿವಾಹವು ಮುಂದಿನ ದಿನಗಳಲ್ಲಿ ನಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ನ್ಯೂಜಿಲೆಂಡ್‌ನಲ್ಲಿ ಕೋವಿಡ್ ನಿಯಮಗಳನ್ನು ಮತ್ತಷ್ಟು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. ವಿವಾಹ ಸಮಾರಂಭಕ್ಕೆ ಪೂರ್ಣವಾಗಿ ಲಸಿಕೆ ಪಡೆದ 100 ಮಂದಿಗೆ ಭಾಗವಹಿಸಲು ಅವಕಾಶ ನೀಡಲಾಗಿದೆ.

ದೀರ್ಘಕಾಲದ ಜೊತೆಗಾರ ಕ್ಲಾರ್ಕ್‌ ಗೆಫಾರ್ಡ್‌ ಅವರ ಜೊತೆ ಆರ್ಡೆನ್ ಅವರ ವಿವಾಹವನ್ನು ಮುಂದಿನ ವಾರಗಳಲ್ಲಿ ನಿಶ್ಚಯಿಸಲಾಗಿತ್ತು. ಆದರೆ ದಿನಾಂಕವನ್ನು ಘೋಷಿಸಲಾಗಿರಲಿಲ್ಲ.

ಕೋವಿಡ್‌ ಕಠಿಣ ನಿಯಮಗಳ ಹೇರಿಕೆಯಿಂದ ತಮ್ಮ ಮದುವೆ ರದ್ಧುಗೊಂಡ ಬಗೆಗಿನ ಪ್ರಶ್ನೆಗೆ ಜೀವನ ಎಂದರೆ ಹೀಗೆಯೇ ಎಂದು ಜೆಸಿಂದಾ ಉತ್ತರಿಸಿದ್ದಾರೆ.

ಸೋಂಕಿನಿಂದ ಹೆಚ್ಚು ಸಂಕಷ್ಟಕ್ಕೆ ಒಳಗಾದ ನ್ಯೂಜಿಲೆಂಡ್‌ ಸಾವಿರಾರು ಮಂದಿಯಲ್ಲಿ ನಾನೂ ಒಬ್ಬಳು. ಅದರಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಪ್ರೀತಿ ಪಾತ್ರರ ಜೊತೆಗೆ ಇರಲಾಗದೆ ಇರುವ ಸ್ಥಿತಿ ಕರುಳು ಹಿಂಡುವಂತದ್ದಾಗಿದೆ ಎಂದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

“ಮಾಯಾವತಿ ಮಂಕಾದರೆ? ಚುನಾವಣೆ ಸಮೀಪಿಸಿದರೂ ಪ್ರಚಾರ ಮಾಡುತ್ತಿಲ್ಲ”!

ಮನೆ ಕಟ್ಟಲು ಬಿಡದ ಪಿಡಿಒ: ಹೈಟೆನ್ಶನ್ ಕಂಬವೇರಿ ರೈತ ಆತ್ಮಹತ್ಯೆಗೆ ಯತ್ನ

ಪೊಲೀಸ್ ಮಾಹಿತಿದಾರನನ್ನು ಕೊಂದು, ಮೂರು ವಾಹನಕ್ಕೆ ಬೆಂಕಿಯಿಟ್ಟ ನಕ್ಸಲರು!

ಹಸುವನ್ನು ಮೇಯಿಸಲು ಹೋಗಿದ್ದ ವೃದ್ಧ ಹುಲಿ ದಾಳಿಗೆ ಬಲಿ!

ಯುವ ಕಾಂಗ್ರೆಸ್ ನಾಯಕಿಗೆ ಚೂರಿ ಇರಿತ

ಇತ್ತೀಚಿನ ಸುದ್ದಿ