ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಪಿಎಫ್ ಐ ಪ್ರಮುಖರ ಮೇಲೆ ಎನ್.ಐ.ಎ ದಾಳಿ ಖಂಡಿಸಿ ಪತ್ರಿಕಾಗೋಷ್ಠಿ! - Mahanayaka

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಪಿಎಫ್ ಐ ಪ್ರಮುಖರ ಮೇಲೆ ಎನ್.ಐ.ಎ ದಾಳಿ ಖಂಡಿಸಿ ಪತ್ರಿಕಾಗೋಷ್ಠಿ!

pfi press meet
07/09/2022


Provided by

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಕಾರ್ಯಕರ್ತ ಪ್ರವೀಣ್ ‌ನೆಟ್ಟಾರು ಹತ್ಯೆ ಪ್ರಕರಣ ಸಂಬಂಧಿಸಿದಂತೆ ಪಿಎಫ್ ಐ ಪ್ರಮುಖರ ಮೇಲೆ ಎನ್.ಐ.ಎ ದಾಳಿಯನ್ನು ಖಂಡಿಸಿ ಮಂಗಳೂರಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಇಂದು ಸುದ್ದಿಗೋಷ್ಟಿ ನಡೆಸಿತು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಪಿಎಫ್ ಐ ರಾಜ್ಯ ಕಾರ್ಯದರ್ಶಿ ಎ.ಕೆ.ಅಶ್ರಫ್, ಪ್ರವೀಣ್ ಕೊಲೆ ಕೇಸ್ ನೆಪದಲ್ಲಿ ಬಿಜೆಪಿ ‌ಎನ್.ಐಎಯನ್ನು ದುರ್ಬಳಕೆ ಮಾಡ್ತಿದೆ. ಪಿಎಫ್ ಐ ನಾಯಕರು ಎಂಬ ಕಾರಣಕ್ಕೆ ಮುಸ್ಲಿಂ ಮುಖಂಡರನ್ನು ಟಾರ್ಗೆಟ್ ಮಾಡಲಾಗ್ತಿದೆ.

ಶಿವಮೊಗ್ಗದ ಹರ್ಷ ‌ಮತ್ತು ಪ್ರವೀಣ್ ಕೇಸ್ ಎನ್.ಐ.ಎಗೆ ವಹಿಸಲಾಗಿದೆ. ಆದರೆ ಇದರಲ್ಲಿ ಸರ್ಕಾರ ದ್ವಿಮುಖ ನೀತಿ ಅನುಸರಿಸ್ತಿದೆ.‌ ಬೆಳಗಾವಿಯ ಅರ್ಬಾಝ್, ಶಮೀರ್ ಕೇಸ್ ನಲ್ಲಿ ಸಂಘಪರಿವಾರ ಇದೆ. ಆದರೆ ಇದನ್ನ ಯಾಕೆ ಸರ್ಕಾರ ಎನ್.ಐ.ಎಗೆ ವಹಿಸಿಲ್ಲ ಎಂದು ಪ್ರಶ್ನಿಸಿದರು.

ಇನ್ನು ಬೆಳ್ಳಾರೆಯ ಮಸೂದ್ ಮತ್ತು ಸುರತ್ಕಲ್ ಫಾಝಿಲ್ ಕೇಸನ್ನು ಯಾಕೆ ಎನ್.ಐ.ಎಗೆ ವಹಿಸಿಲ್ಲ..? ರಾಜ್ಯದಲ್ಲಿ ‌ನಡೆದ ಮುಸ್ಲಿಂ ಯುವಕರ ಹತ್ಯೆಯಲ್ಲಿ ಸಂಘಪರಿವಾರದ ಕೈವಾಡ ಇದೆ. ಮುಸ್ಲಿಂ ಯುವಕರು ಆರೋಪಿಗಳಾಗಿರೋ ಕೇಸ್ ಗಳನ್ನ ಮಾತ್ರ ಎನ್.ಐ.ಎಗೆ ವಹಿಸಲಾಗ್ತಿದೆ. ಇದು ಬಿಜೆಪಿ ಸರ್ಕಾರ ಎನ್.ಐ.ಎ ಎಂಬ ತನಿಖಾ ಸಂಸ್ಥೆಯನ್ನ‌ ದುರ್ಬಳಕೆ ‌ಮಾಡಲಾಗ್ತಿದೆ. ಬಿಜೆಪಿ ವಿರುದ್ದದ ಕಾರ್ಯಕರ್ತರ ಅಸಮಾಧಾನ ಸರಿ ಪಡಿಸಲು ಎ‌ನ್.ಐ.ಎಗೆ ವಹಿಸಲಾಗಿದೆ ಎಂದು ಆರೋಪಿಸಿದ ಅವ್ರು ವಿಧಾನಸಭಾ ಚುನಾವಣೆ ಮುಂದಿಟ್ಟು ಈ ಕೆಲಸ ಮಾಡಲಾಗಿದೆ ಎಂದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ