ನಿಧಿಗಾಗಿ ದೇವಸ್ಥಾನದ ಗರ್ಭಗುಡಿ ಅಗೆದ 7 ಆರೋಪಿಗಳ ಬಂಧನ - Mahanayaka
10:51 AM Thursday 4 - September 2025

ನಿಧಿಗಾಗಿ ದೇವಸ್ಥಾನದ ಗರ್ಭಗುಡಿ ಅಗೆದ 7 ಆರೋಪಿಗಳ ಬಂಧನ

aloor
20/06/2021


Provided by

ಹಾಸನ: ಪುರಾತನ ಕಾಲದ ದೇವಾಲಯದ ಗರ್ಭಗುಡಿಯನ್ನು ಅಗೆದು ನಿಧಿಗಾಗಿ ಶೋಧ ನಡೆಸಿದ 7 ಮಂದಿ  ಆರೋಪಿಗಳನ್ನು ಆಲೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.

ಹಾಸನ ಸಹಕಾರಿ ಸಂಘಗಳ ಉಪ ನಿಬಂಧಕ ನಾರಾಯಣ್, ಅರ್ಚಕ ತಿಪ್ಪೇಸ್ವಾಮಿ, ಜ್ಯೋತಿಷಿ ಮಂಜುನಾಥ್, ಚನ್ನರಾಯಪಟ್ಟಣ ಮೂಲದ ಜಯರಾಮ್, ಚೇತನ್, ಮಂಜುನಾಥ್, ಹಾಸನ ಮೂಲದ ಕುಮಾರ್ ಬಂಧಿತ ಆರೋಪಿಗಳು.

ಜಿಲ್ಲೆಯ ಆಲೂರು ತಾಲೂಕಿನ ಕೆ.ಹೊಸಕೋಟೆ ಸಮೀಪದ ಪಾರ್ವತಮ್ಮನ ಬೆಟ್ಟದಲ್ಲಿರುವ ದೇಗುಲದಲ್ಲಿ ನಿಧಿಗಾಗಿ ದೇವಾಲಯದ ಗರ್ಭಗುಡಿಯನ್ನು ಅಗೆದಿರುವ ಬಗ್ಗೆ ದೇವಾಲಯದ ಆಡಳಿತ ಮಂಡಳಿ ಪೊಲೀಸರಿಗೆ ದೂರನ್ನು ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದಿದ್ದರು. ತನಿಖೆ ವೇಳೆ ಆರೋಪಿಗಳು ನಾಲ್ಕು ದಿನಗಳ ಹಿಂದೆ ರಾತ್ರೊ ರಾತ್ರಿ ಬೆಟ್ಟದ ಮೇಲೆ ಶೋಧ ನಡೆಸಿರುವುದು ಬೆಳಕಿಗೆ ಬಂದಿದೆ.

ಇತ್ತೀಚಿನ ಸುದ್ದಿ