ನೈಜೀರಿಯಾದಲ್ಲಿ ದೋಣಿ ಮುಳುಗಿ 27 ಮಂದಿ ಸಾವು: 100ಕ್ಕೂ ಹೆಚ್ಚು ಮಂದಿ ನಾಪತ್ತೆ - Mahanayaka
12:20 PM Wednesday 22 - October 2025

ನೈಜೀರಿಯಾದಲ್ಲಿ ದೋಣಿ ಮುಳುಗಿ 27 ಮಂದಿ ಸಾವು: 100ಕ್ಕೂ ಹೆಚ್ಚು ಮಂದಿ ನಾಪತ್ತೆ

30/11/2024

ಉತ್ತರ ನೈಜೀರಿಯಾದ ನೈಜರ್ ನದಿಯಲ್ಲಿ ಆಹಾರವನ್ನು ಮಾರುಕಟ್ಟೆಗೆ ಸಾಗಿಸುತ್ತಿದ್ದ ದೋಣಿ ಮಗುಚಿ ಕನಿಷ್ಠ 27 ಜನರು ಸಾವನ್ನಪ್ಪಿದ್ದಾರೆ ಮತ್ತು 100 ಕ್ಕೂ ಹೆಚ್ಚು ಮಹಿಳೆಯರು ಕಾಣೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೋಗಿ ರಾಜ್ಯದಿಂದ ನೆರೆಯ ರಾಜ್ಯ ನೈಜರ್ ಗೆ ತೆರಳುತ್ತಿದ್ದ ದೋಣಿ ಮುಳುಗಿದಾಗ ಸುಮಾರು 200 ಪ್ರಯಾಣಿಕರು ಇದ್ದರು ಎಂದು ನೈಜರ್ ರಾಜ್ಯ ತುರ್ತು ನಿರ್ವಹಣಾ ಏಜೆನ್ಸಿಯ ವಕ್ತಾರ ಇಬ್ರಾಹಿಂ ಆಡು ಅಸೋಸಿಯೇಟೆಡ್ ಪ್ರೆಸ್ ಗೆ ತಿಳಿಸಿದ್ದಾರೆ.

ಶುಕ್ರವಾರ ಸಂಜೆಯ ವೇಳೆಗೆ ರಕ್ಷಣಾ ಸಿಬ್ಬಂದಿ 27 ಶವಗಳನ್ನು ನದಿಯಿಂದ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದು, ಇನ್ನೂ ಇತರರಿಗಾಗಿ ಶೋಧ ನಡೆಸುತ್ತಿದ್ದಾರೆ ಎಂದು ಕೋಗಿ ರಾಜ್ಯ ತುರ್ತು ಸೇವೆಗಳ ವಕ್ತಾರೆ ಸಾಂಡ್ರಾ ಮೂಸಾ ತಿಳಿಸಿದ್ದಾರೆ.
ಘಟನೆ ನಡೆದ ಸುಮಾರು 12 ಗಂಟೆಗಳ ನಂತರ ಯಾವುದೇ ಬದುಕುಳಿದವರು ಕಂಡುಬಂದಿಲ್ಲ ಎಂದು ಅವರು ಹೇಳಿದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ