ನಿಂಬೆ ರಸ ಮೂಗಿಗೆ ಹಾಕಿಕೊಳ್ಳುವುದರಿಂದ ಉಸಿರಾಟದ ಸಮಸ್ಯೆಗೆ ಮುಕ್ತಿ | ವಿಜಯ ಸಂಕೇಶ್ವರ ಹೇಳಿಕೆ - Mahanayaka
1:26 AM Wednesday 20 - August 2025

ನಿಂಬೆ ರಸ ಮೂಗಿಗೆ ಹಾಕಿಕೊಳ್ಳುವುದರಿಂದ ಉಸಿರಾಟದ ಸಮಸ್ಯೆಗೆ ಮುಕ್ತಿ | ವಿಜಯ ಸಂಕೇಶ್ವರ ಹೇಳಿಕೆ

vijaya sankeshwar
25/04/2021


Provided by

ಹುಬ್ಬಳ್ಳಿ:  ನಿಂಬೆ ಹಣ್ಣಿನ ರಸವನ್ನು ಮೂಗಿಗೆ ಹಾಕಿಕೊಳ್ಳುವುದರಿಂದ ಅರ್ಧಗಂಟೆಯಲ್ಲಿ ಶ್ವಾಸಕೋಶದಲ್ಲಿ ಸಂಗ್ರಹವಾಗಿರುವ ಕಫ ಹೊರ ಬಂದು ಉಸಿರಾಟದ ಸಮಸ್ಯೆ ಸರಿ ಹೋಗಲಿದೆ ಎಂದು ಉದ್ಯಮಿ ಹಾಗೂ ಕರ್ನಾಟಕದ ನ್ಯೂಸ್ ಚಾನೆಲ್ ಹಾಗೂ ಪತ್ರಿಕೆಯೊಂದರ ಮಾಲಿಕರಾಗಿರುವ ಡಾ.ವಿಜಯ ಸಂಕೇಶ್ವರ ಹೇಳಿದ್ದಾರೆ.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿನಕ್ಕೆ ಎರಡು ಬಾರಿ 3-4 ಹನಿ ನಿಂಬೆ ರಸವನ್ನು ಮೂಗಿಗೆ ಹಾಕಿಕೊಳ್ಳುವುದರಿಂದ 30-45 ನಿಮಿಷದೊಳಗೆ  ಶ್ವಾಸಕೋಶದಲ್ಲಿ ಸಂಗ್ರಹವಾಗಿರುವ ಕಫ ಹೊರ ಬಂದು ಉಸಿರಾಟದ ಪ್ರಮಾಣ ಸಾಮಾನ್ಯ ಸ್ಥಿತಿಗೆ ಬರುತ್ತದೆ  ಎಂದು ಸಂಕೇಶ್ವರ ಹೇಳಿದ್ದಾರೆ.

ಈ ವಿಧಾನವನ್ನು ನಾನು ಮತ್ತು ನನ್ನ ಕುಟುಂಬ ಸೇರಿದಂತೆ 200 ಜನರು ಅನುಸರಿಸಿ ಯಶಸ್ವಿಯಾಗಿದ್ದೇವೆ. ಈ ಕ್ರಮವನ್ನು ಅನುಸರಿಸಿದವರು ನನಗೆ ಕರೆ ಮಾಡಿ ಫಲಿತಾಂಶ ತಿಳಿಸಿದ್ದು, ಅವರು ಉಸಿರಾಟದ ತೊಂದರೆಯಿಂದ ಮುಕ್ತರಾಗಿದ್ದಾರೆ ಎಂದು ವಿಜಯ ಸಂಕೇಶ್ವರ ತಿಳಿಸಿದ್ದಾರೆ. ಇದರ ಜೊತೆಗೆ ವೈದ್ಯಕೀಯ ಚಿಕಿತ್ಸೆಯನ್ನು ಕೂಡ ಅನುಸರಿಸಬೇಕು ಎಂದು ಅವರು ಸಲಹೆ ನೀಡಿದರು.

ಇತ್ತೀಚಿನ ಸುದ್ದಿ