ನೀವು ಒಬ್ಬ ವ್ಯಕ್ತಿಯ ಮುಖ ಮಾತ್ರ ತೋರಿಸುತ್ತೀರಿ, ನಿಮ್ಮ ಕಷ್ಟಕ್ಕೆ ಅವರು ಬಂದಿದ್ದಾರೆಯೇ? | ಪತ್ರಕರ್ತರಿಗೆ ರಾಹುಲ್ ಪ್ರಶ್ನೆ - Mahanayaka
5:51 PM Thursday 16 - October 2025

ನೀವು ಒಬ್ಬ ವ್ಯಕ್ತಿಯ ಮುಖ ಮಾತ್ರ ತೋರಿಸುತ್ತೀರಿ, ನಿಮ್ಮ ಕಷ್ಟಕ್ಕೆ ಅವರು ಬಂದಿದ್ದಾರೆಯೇ? | ಪತ್ರಕರ್ತರಿಗೆ ರಾಹುಲ್ ಪ್ರಶ್ನೆ

rahul gandhi
19/12/2021

ನವದೆಹಲಿ: ಪತ್ರಕರ್ತರಿಗೆ ಕೆಲಸ ಮಾಡಲು ಭಾರತ ಅಪಾಯಕಾರಿ ದೇಶ ಎಂಬ ವರದಿಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನೀವು ಒಬ್ಬ ವ್ಯಕ್ತಿಯದ್ದೇ ಮುಖ ತೋರಿಸುತ್ತೀರಿ ಆದರೆ, ಆ ವ್ಯಕ್ತಿ ಎಂದಾದರೂ ನಿಮ್ಮ ಪರವಾಗಿ ಮಾತನಾಡಿದ್ದಾರಾ? ಎಂದು ಪತ್ರಕರ್ತರನ್ನು ಪ್ರಶ್ನಿಸಿದ್ದಾರೆ.


Provided by

ಭಾರತದಲ್ಲಿ ಅನೇಕ ಮಾಧ್ಯಮಗಳು ಒಬ್ಬ ವ್ಯಕ್ತಿಯ ಆರಾಧನೆಯಲ್ಲಿ ತೊಡಗಿಕೊಂಡಿವೆ. ಭಿನ್ನ ಧ್ವನಿಯನ್ನು ಹತ್ತಿಕ್ಕುತ್ತಿದ್ದಾರೆ. ಅದನ್ನು ಸಾರ್ವಜನಿಕರಿಗೆ  ತಲುಪಲು ಬಿಡುತ್ತಿಲ್ಲ. ಆದರೆ ಆ ಒಬ್ಬ ವ್ಯಕ್ತಿ ಎಂದಾದರೂ ನಿಮ್ಮ ಪರವಾಗಿ ಬಂದಿದ್ದಾರೆಯೇ? ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟಾಂಗ್ ನೀಡಿದರು.

ನಿಮಗೆ ಸರಿ ಅನ್ನಿಸಿದ್ದನ್ನು ಮಾಡಿ. ಆದರೆ, ನೆನೆನಪಿರಲಿ. ನಿಮ್ಮ ಮೇಲೆ ಅನ್ಯಾಯ, ಹಿಂಸಾಚಾರ ನಡೆದರೆ, ನಾನು ನಿಮ್ಮ ಜೊತೆಗೆ ಹಿಂದೆಯೂ ಇದ್ದೆ, ಮುಂದೆಯೂ ಇರುತ್ತೇನೆ ಎಂದು ರಾಹುಲ್ ಗಾಂಧಿ ಟ್ವೀಟ್ ಮೂಲಕ ಪತ್ರಕರ್ತರಿಗೆ ಅಭಯ ನೀಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಜವಾಬ್ದಾರಿಯುತವಾಗಿ ಬಳಸಿ: ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು

ಪಶ್ಚಿಮ ಬಂಗಾಳ: ಬೆಳೆ ನಾಶ ಬೇಸತ್ತು ಮೂವರು ರೈತರ ಆತ್ಮಹತ್ಯೆ

ಇತ್ತೀಚಿನ ಸುದ್ದಿ