ಮಂಗಳೂರು: ನಿಮ್ಮ ವಾಹನದ ವಿಮೆ ಅವಧಿ ಮುಗಿದಿದ್ದರೆ 4 ಸಾವಿರದವರೆಗೆ ದಂಡ ಖಚಿತ - Mahanayaka
8:26 PM Wednesday 14 - January 2026

ಮಂಗಳೂರು: ನಿಮ್ಮ ವಾಹನದ ವಿಮೆ ಅವಧಿ ಮುಗಿದಿದ್ದರೆ 4 ಸಾವಿರದವರೆಗೆ ದಂಡ ಖಚಿತ

mangalore police
30/09/2021

ಮಂಗಳೂರು: ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಸೆ.27ರಿಂದ ಆರಂಭವಾಗಿ ಅಕ್ಟೋಬರ್ 2ರವರೆಗೆ  ನಡೆಯಲಿರುವ  ಸುರಕ್ಷಿತ ಸಂಚಾರ ಕಾರ್ಯಕ್ರಮದ ಪ್ರಕಾರ ಕಳೆದ ಮೂರು ದಿನಗಳಿಂದ ವಾಹನ ಸವಾರರಿಗೆ ದಂಡ ಹಾಕುವ ಮೂಲಕ ಪೊಲೀಸರು ಜಾಗೃತಿ ಮೂಡಿಸುತ್ತಿದ್ದಾರೆ.

ಇಂದು(ಸೆ.30) ವಾಹನಗಳಿಗೆ ವಿಮೆ ಇಲ್ಲದಿದ್ದರೆ ಅಥವಾ ವಿಮೆ ಅವಧಿ ಮುಗಿದಿದ್ದರೆ ದ್ವಿಚಕ್ರ/ತ್ರಿಚಕ್ರ ವಾಹನ 1000 ರೂಪಾಯಿ,  ಲಘು ವಾಹನ 2000 ರೂಪಾಯಿ,  ಭಾರೀ ವಾಹನ 4000 ರೂಪಾಯಿ ದಂಡ ವಿಧಿಸಲಾಗಿದೆ. ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಪೊಲೀಸರ ಈ ಜಾಗೃತಿ ಕಾರ್ಯಕ್ರಮಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ರಸ್ತೆ ಸಂಚಾರಿ ನಿಯಮಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಪೊಲೀಸರ ಈ ವಿನೂತನ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದು ಸಾರ್ವಜನಿಕರು ಅಭಿಪ್ರಾಯ ಪಡುತ್ತಿದ್ದಾರೆ. ಇನ್ನೊಂದೆಡೆಯಲ್ಲಿ, ಪೊಲೀಸರ ವಾಹನಗಳಲ್ಲಿಯೇ ನಂಬರ್ ಪ್ಲೇಟ್ ಗಳು ದೋಷಯುಕ್ತವಾಗಿದೆ. ಅವುಗಳಿಗೆ ದಂಡ ಹಾಕುವವರು ಯಾರು? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/KPRE32QAEFL3ZvRW2wbYvj

ಇನ್ನಷ್ಟು ಸುದ್ದಿಗಳು…

ಶಿವಮೊಗ್ಗ ಡಿಸಿ ಕಚೇರಿ ಸಿಬ್ಬಂದಿ ನಾಪತ್ತೆಗೆ ಹೊಸ ತಿರುವು: ನಾಪತ್ತೆಯಾದ ದಿನ ಹಣ ಡ್ರಾ ಮಾಡಿದ್ದ ಗಿರಿರಾಜ್!

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ ಅವರಿಗೆ “ನೈಟ್ ಪೊಲಿಟಿಕ್ಸ್” ಚೆನ್ನಾಗಿ ಗೊತ್ತು | ಬಿಜೆಪಿ ನಾಯಕ ವಿವಾದಾತ್ಮಕ ಹೇಳಿಕೆ

ಟೋಲ್ ಗೇಟ್ ಸಿಬ್ಬಂದಿಯಿಂದ ವಾಹನ ಸವಾರರ ಮೇಲೆ ಹಲ್ಲೆ

ಕಣ್ಣ ಮುಂದೆಯೇ ಬಾಲಕನಿಗೆ ವಿದ್ಯುತ್ ಶಾಕ್ ಹೊಡೆದರೂ ರಕ್ಷಿಸಲು ಸಾಧ್ಯವಾಗಲಿಲ್ಲ!

ಅನೈತಿಕ ಸಂಬಂಧದ ಆರೋಪ ಹೊರಿಸಿ ಮಹಿಳೆ ಹಾಗೂ ಪುರುಷನ ಬೆತ್ತಲೆ ಮೆರವಣಿಗೆ!

ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬಂದರೆ, ಮಹಿಳೆಯರ ಸಾಲ ಮನ್ನಾ | ಅನಿತಾ ಕುಮಾರಸ್ವಾಮಿ

ವ್ಯಕ್ತಿಗೆ ಕೊವಿಡ್ ಲಸಿಕೆಯ ಬದಲು ರೇಬಿಸ್ ನಿರೋಧಕ ಚುಚ್ಚು ಮದ್ದು ನೀಡಿದ ನರ್ಸ್!

ಇತ್ತೀಚಿನ ಸುದ್ದಿ