ಕೇರಳದಲ್ಲಿ ಸಾವನ್ನಪ್ಪಿದ ಯುವಕನಿಗೆ ನಿಫಾಹ್ ವೈರಸ್ ಅಟ್ಯಾಕ್: ಪುಣೆ ಲ್ಯಾಬ್ ‍ದೃಢ - Mahanayaka
10:58 PM Thursday 11 - September 2025

ಕೇರಳದಲ್ಲಿ ಸಾವನ್ನಪ್ಪಿದ ಯುವಕನಿಗೆ ನಿಫಾಹ್ ವೈರಸ್ ಅಟ್ಯಾಕ್: ಪುಣೆ ಲ್ಯಾಬ್ ‍ದೃಢ

16/09/2024

ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ 23 ವರ್ಷದ ಮೃತ ಬೆಂಗಳೂರಿನ ವಿದ್ಯಾರ್ಥಿಗೆ ನಿಫಾಹ್ ವೈರಸ್​ ಸೋಂಕು ತಗುಲಿತ್ತು ಎಂದು ಪುಣೆ ವೈರಾಲಜಿ ಇನ್ ಸ್ಟಿಟ್ಯೂಟ್ ದೃಢಪಡಿಸಿದೆ. ಬೆಂಗಳೂರಿನಲ್ಲಿ ವಿದ್ಯಾರ್ಥಿಯಾಗಿದ್ದ ವಂಡೂರಿನ ನಡುವತ್ ಬಳಿಯ ಚೆಂಬರಂ ನಿವಾಸಿ. ಇವರು ಪೆರಿಂಥಲ್ಮಣ್ಣದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೃತ ಯುವಕನೊಂದಿಗೆ ನೇರ ಸಂಪರ್ಕಕ್ಕೆ ಬಂದ 151 ಜನರ ಪಟ್ಟಿಯನ್ನು ಆರೋಗ್ಯ ಇಲಾಖೆ ಭಾನುವಾರ ಬಿಡುಗಡೆ ಮಾಡಿದೆ. ಈ ಸಂಪರ್ಕ ಪಟ್ಟಿಯಲ್ಲಿನ ಮೂವರಲ್ಲಿ ವೈರಸ್ ಲಕ್ಷಣಗಳು ಕಂಡುಬಂದಿವೆ ಎಂದು ಇಲಾಖೆ ತಿಳಿಸಿದೆ.


Provided by

ಕಾಲಿಗೆ ಗಾಯ ಮಾಡಿಕೊಂಡಿದ್ದ ಮೃತ ಯುವಕ ಇತ್ತೀಚೆಗೆ ಬೆಂಗಳೂರಿನಿಂದ ಬಂದಿದ್ದ ಎಂದು ಮಲಪ್ಪುರಂ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಐಎಎನ್ಎಸ್​ಗೆ ತಿಳಿಸಿದ್ದಾರೆ. ನಂತರ ಯುವಕನಿಗೆ ಜ್ವರ ಕಾಣಿಸಿಕೊಂಡಿತ್ತು. ಚಿಕಿತ್ಸೆಗಾಗಿ ಆತ ನಡುವತ್​ನ ಕ್ಲಿನಿಕ್​ಗೆ ಮತ್ತು ಮಲಪ್ಪುರಂನ ವಂಡೂರ್​ ನಲ್ಲಿರುವ ಮತ್ತೊಂದು ಕ್ಲಿನಿಕ್​ಗೆ ಭೇಟಿ ನೀಡಿದ್ದ. ಯುವಕ ಭಾನುವಾರ ನಿಧನರಾದ ನಂತರ ಆತನ ರಕ್ತದ ಮಾದರಿಗಳನ್ನು ನಿಪಾಹ್ ವೈರಸ್ ಪರೀಕ್ಷೆಗಾಗಿ ಪುಣೆ ವೈರಾಲಜಿ ಲ್ಯಾಬ್​ಗೆ ಕಳುಹಿಸಲಾಗಿತ್ತು.

ಜೀವ ಉಳಿಸುವ ಪ್ರಯತ್ನವಾಗಿ, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಸಂಸ್ಥೆಯು ಆಸ್ಟ್ರೇಲಿಯಾದಿಂದ ಖರೀದಿಸಿದ ಮೊನೊಕ್ಲೋನಲ್ ಪ್ರತಿಕಾಯವನ್ನು ವೈದ್ಯರು ಆತನಿಗೆ ಇಂಜೆಕ್ಷನ್ ಮೂಲಕ ನೀಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ