ಮಾರ್ಚ್ 20 ರಿಂದ 25ರವರೆಗೆ ಮಂಗಳೂರಿನಲ್ಲಿ ʼನಿರ್ದಿಗಂತ ರಂಗೋತ್ಸವʼ

20/03/2024
ಮಂಗಳೂರಿನಲ್ಲಿ ಮಾರ್ಚ್ 20 ರಿಂದ 25 ರ ತನಕ ನಿರ್ದಿಗಂತ ರಂಗೋತ್ಸವ ನಡೆಯಲಿದೆ. ನಾಟಕಗಳು, ಸಂಗೀತ, ವಿಚಾರಸಂಕಿರಣ, ಸಿನೆಮಾ ಸೇರಿದಂತೆ ಹಲವು ಸೌಂದರ್ಯ ವಿಜ್ಞಾನಗಳ ಸಮ್ಮೇಳನ ಇದಾಗಿದೆ.
ಈ 6 ದಿನಗಳ ಕಾಲ ಉತ್ಸವದಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ಈ ಕೆಳಗೆ ನಮೂದಿಸಿದ ಫೋನ್ ನಂ ಗೆ ಕಾಲ್ ಮಾಡಿ ಹೆಸರು ನೊಂದಾಯಿಸಿಕೊಳ್ಳಬಹುದು.
ನೊಂದಾಯಿಸಿಕೊಂಡ ಪ್ರತಿನಿಧಿಗಳ ವಸತಿ, ಆಹಾರ ಇವುಗಳ ವ್ಯವಸ್ಥೆಯನ್ನು ನಿರ್ದಿಗಂತ ಮಾಡಲಿದೆ. ಆಸಕ್ತ ರಂಗಕರ್ಮಿಗಳು ಇದರ ಪ್ರಯೋಜನ ಪಡೆಯಲು ಕೋರಿಕೆ. 50 ಪ್ರತಿನಿಧಿಗಳಿಗೆ ಅವಕಾಶವಿದೆ.
ಶ್ರೀಪಾದ ಭಟ್: 9448182042
ಕ್ರಿಸ್ಟೋಫರ್: 9113226234
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth