ಅವಿರತ ಪ್ರತಿಷ್ಠಾನದ ವತಿಯಿಂದ ಬಣಕಲ್ ವಿಲೇಜ್ ಶಾಲೆಯಲ್ಲಿ ನೋಟ್ ಪುಸ್ತಕ ವಿತರಣೆ - Mahanayaka

ಅವಿರತ ಪ್ರತಿಷ್ಠಾನದ ವತಿಯಿಂದ ಬಣಕಲ್ ವಿಲೇಜ್ ಶಾಲೆಯಲ್ಲಿ ನೋಟ್ ಪುಸ್ತಕ ವಿತರಣೆ

kotigehara
05/07/2024


Provided by

ಕೊಟ್ಟಿಗೆಹಾರ: ಅವಿರತ ಪ್ರತಿಷ್ಠಾನದ ವತಿಯಿಂದ ಬಣಕಲ್ ವಿಲೇಜ್ ಶಾಲೆಯಲ್ಲಿ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.

ಅವಿರತ ಪ್ರತಿಷ್ಠಾನದ ಪರವಾಗಿ ಮಾತನಾಡಿದ ಸುಜ್ಞಾನ್ ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಅವಿರತ ಪ್ರತಿಷ್ಠಾನ ನಾಡಿನೆಲ್ಲೆಡೆ ತನ್ನದೇ ಕೊಡುಗೆ ನೀಡುತ್ತಾ ಬಂದಿದ್ದು, ಅದರಲ್ಲಿ ನೋಟ್ ಬುಕ್ ವಿತರಣೆಯು ಪ್ರಮುಖ ಕಾರ್ಯಕ್ರಮವಾಗಿದೆ ಎಂದರು.

ಶಾಲಾ ಮುಖ್ಯ ಶಿಕ್ಷಕರಾದ ಶಿವಮೂರ್ತಿ ಮಾತನಾಡಿ, ಅವಿರತ ಪ್ರತಿಷ್ಠಾನದವರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಅಲ್ಲದೇ ಬಣಕಲ್ ವಿಲೇಜ್ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಸೇರಿದಂತೆ ತಂತ್ರಜ್ಞಾನ ಆಧಾರಿತ ಆಧುನಿಕ ಶಿಕ್ಷಣ ಕ್ರಮಗಳನ್ನು ಅಳವಡಿಸಿ ಕೊಂಡಿದ್ದು ಬಣಕಲ್ ಸುತ್ತಮುತ್ತಲಿನ ಜನರು ತಮ್ಮ ಮಕ್ಕಳನ್ನು ಶಾಲೆಗೆ ದಾಖಲಿಸುವ ಮೂಲಕ ಸೌಲಭ್ಯಗಳ ಸದುಪಯೋಗ ಪಡಿಸಿಕೊಳ್ಳ ಬೇಕು ಎಂದು ಮನವಿ ಮಾಡಿದರು.

ಶಾಲಾ ಶಿಕ್ಷಕರಾದ ಪೂರ್ಣೇಶ್ ಮತ್ತಾವರ, ಎಸ್.ಡಿ.ಎಂ.ಸಿ ಸದಸ್ಯರು, ಪೋಷಕರು ಹಾಜರಿದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ