ಪೊಲೀಸರ ಭಯವಿಲ್ಲ: ನಡು ರಸ್ತೆಯಲ್ಲಿ ರೋಡ್ ರೋಮಿಯೋಗಳ ವೀಲ್ಹಿಂಗ್ - Mahanayaka

ಪೊಲೀಸರ ಭಯವಿಲ್ಲ: ನಡು ರಸ್ತೆಯಲ್ಲಿ ರೋಡ್ ರೋಮಿಯೋಗಳ ವೀಲ್ಹಿಂಗ್

chikkamagaluru
15/07/2025


Provided by

Mahanayaka– ಚಿಕ್ಕಮಗಳೂರು:  ಪೊಲೀಸರ ಭಯವಿಲ್ಲದೆ ನಡು ರಸ್ತೆಯಲ್ಲಿ ರೋಡ್ ರೋಮಿಯೋಗಳು ವೀಲ್ಹಿಂಗ್ ನಡೆಸಿರುವ ಘಟನೆ ಎಸ್ಪಿ ಆಫೀಸ್ ಪಕ್ಕದ ರಸ್ತೆಯಲ್ಲೇ ನಡೆದಿದೆ.  ನಗರದ ಜನದಟ್ಟಣೆ ಜಾಗದಲ್ಲೇ ಯುವಕರ ವೀಲ್ಹಿಂಗ್ ಮೋಹ ಸಾರ್ವಜನಿಕರಿಗೆ ಆತಂಕ ಸೃಷ್ಟಿಸಿದೆ.

ಎಸ್ಪಿ ಆಫೀಸ್, ಡಿಸಿ ಆಫೀಸ್, ಕೋರ್ಟ್ ಸರ್ಕಲ್ ನಲ್ಲಿ ಯುವಕರು ಹುಚ್ಚಾಟ ಮೆರೆದಿದ್ದಾರೆ. ಡಬಲ್ ರೈಡ್ ನಲ್ಲಿ ಆಕ್ಟೀವಾ ಹೋಂಡಾ ಬೈಕಿನಲ್ಲಿ ಯುವಕರು ವೀಲ್ಹಿಂಗ್ ಮಾಡಿದ್ದಾರೆ. ನಡು ರಸ್ತೆಯಲ್ಲಿ ಯುವಕರ ಹುಚ್ಚಾಟ ಕಂಡು ಇತರ ವಾಹನ ಚಾಲಕರು ಆತಂಕಕ್ಕೊಳಗಾಗಿದ್ದಾರೆ.

ಯುವಕರ ಹುಚ್ಚಾಟಕ್ಕೆ ಯಾರಿಗಾದರೂ ಡಿಕ್ಕಿಯೊಡೆದರೆ ಏನಾಗ್ಬೇಡ ಅಂತ ಜನ ಭಯಾತಂಕ ವ್ಯಕ್ತಪಡಿಸಿದ್ದಾರೆ.  ಇಂತಹವರಿಂದ ನಾವು ಸರಿಯಾಗಿದ್ರು, ರಸ್ತೆಯಲ್ಲಿ ಅಪಘಾತ ಗ್ಯಾರಂಟಿ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೊಲೀಸರು ಇಂತವರಿಗೆ ಭಾರೀ ದಂಡ ಹಾಕಿ ಲೈಸನ್ಸ್ ಕ್ಯಾನ್ಸಲ್ ಮಾಡಬೇಕೆಂದು ಆಗ್ರಹ ಕೇಳಿ ಬಂದಿದೆ. ಈ ನಡುವೆ ಪೊಲೀಸರು ಕಿಶೋರ್ ಎಂಬ ಯುವಕನನ್ನು ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ.  ಚಿಕ್ಕಮಗಳೂರು ನಗರದ ಹೃದಯ ಭಾಗ ಡಿಸಿ–ಎಸ್ಪಿ ಕಚೇರಿ ಪಕ್ಕದಲ್ಲೇ ವೀಲ್ಹಿಂಗ್ ನಡೆಸುವ ಮೂಲಕ ಯುವಕರು ಹುಚ್ಚಾಟ ಮೆರೆದಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ