ಹೆಣ್ಣು ಮಗು ಆದ್ರೂ ನಿಲ್ಲಲಿಲ್ಲ ವರದಕ್ಷಿಣೆ ಕಿರುಕುಳ: ಯುವತಿಯನ್ನೇ ಕೊಂದ ಪತಿಯ ಕುಟುಂಬ

ವರದಕ್ಷಿಣೆ ನೀಡದ ಕಾರಣಕ್ಕಾಗಿ ದೆಹಲಿಯ ಗ್ರೇಟರ್ ನೋಯ್ಡಾದಲ್ಲಿ ಆಕೆಯ ಪತಿ ಮತ್ತು ಕುಟುಂಬವು ಸೇರಿಕೊಂಡು ಯುವತಿಯನ್ನು ಹತ್ಯೆ ಮಾಡಲಾದ ದಾರುಣ ಘಟನೆ ನಡೆದಿದೆ. ಟೊಯೋಟಾ ಫಾರ್ಚುನ್ ಮತ್ತು 21 ಲಕ್ಷ ರೂಪಾಯಿಯನ್ನು ವರದಕ್ಷಿಣೆಯಾಗಿ ಕೇಳಲಾಗಿತ್ತು. ಆದರೆ ಅದನ್ನು ನೀಡಿದ ಹಿನ್ನೆಲೆಯಲ್ಲಿ ಯುವತಿಯನ್ನು ಹತ್ಯೆ ಮಾಡಲಾಗಿದೆ.
ಕರಿಷ್ಮಾ ಎಂಬ ಯುವತಿ ಮೃತಪಟ್ಟಿದ್ದು ಆಕೆಯ ಅತ್ತೆ, ಪತಿ ವಿಕಾಸ್ ಮತ್ತು ಮೈದುನನ ಮೇಲೆ ಕೇಸು ದಾಖಲಾಗಿದೆ. ಇವರೆಲ್ಲ ಸೇರಿ ತನ್ನ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ಕರಿಷ್ಮಾ ತನಗೆ ಕರೆ ಮಾಡಿ ತಿಳಿಸಿದ್ದಾಳೆ ಎಂದು ಕರಿಷ್ಮಾಳ ಸಹೋದರ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಮನೆಗೆ ತಲುಪಿದಾಗ ಕರಿಷ್ಮಾ ಮೃತಪಟ್ಟ ಸ್ಥಿತಿಯಲ್ಲಿದ್ದಳು.
2022 ರಲ್ಲಿ ವಿಕಾಸ್ ಮತ್ತು ಕರಿಷ್ಮಾ ನಡುವೆ ಮದುವೆ ನಡೆದಿತ್ತು. ಮದುವೆಯ ಸಂದರ್ಭದಲ್ಲಿ 11 ಲಕ್ಷ ರೂಪಾಯಿಯ ಬಂಗಾರ, ಒಂದು ಎಸ್ಯುವಿ ಕಾರನ್ನು ಕರಿಷ್ಮಾ ಕುಟುಂಬದವರು ವಿಕಾಸ್ ಗೆ ಉಡುಗೊರೆಯಾಗಿ ನೀಡಿದ್ದರು. ಆದರೆ ಇದು ಸಾಕಾಗದು ಎಂದು ಹೇಳಿ ವಿಕಾಸ್ ಕುಟುಂಬದವರು ಇನ್ನಷ್ಟು ವರದಕ್ಷಿಣೆಗಾಗಿ ಕರಿಷ್ಮಾಳನ್ನು ಪೀಡಿಸುತ್ತಿದ್ದರು ಎಂದು ಸಹೋದರ ತಿಳಿಸಿದ್ದಾರೆ. ಕರಿಷ್ಮಾ ಒಂದು ಹೆಣ್ಣು ಮಗುವಿಗೆ ಜನನ ನೀಡಿದ ಬಳಿಕ ಅವರ ದೌರ್ಜನ್ಯ ಹೆಚ್ಚಾಯಿತು. ಆ ಬಳಿಕ ಈ ಕುರಿತಂತೆ ಎರಡು ಕುಟುಂಬಗಳ ನಡುವೆ ಮಾತುಕತೆ ನಡೆದಿದೆ. ಮಾತ್ರ ಅಲ್ಲ 10 ಲಕ್ಷ ರೂಪಾಯಿಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಆದರೂ ದೌರ್ಜನ್ಯ ನಿಂತಿಲ್ಲ ಎಂದು ಕರಿಷ್ಮಾ ಸಹೋದರ ತಿಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth