ಏಕಾಏಕಿ ತೈಲ ಖರೀದಿ ಸ್ಥಗಿತಗೊಳಿಸಿ ಈಗ ರಿಯಾಯಿತಿ ದರ ಕೇಳುತ್ತೀರಾ?: ಭಾರತಕ್ಕೆ ರಷ್ಯಾ ಶಾಕ್ - Mahanayaka

ಏಕಾಏಕಿ ತೈಲ ಖರೀದಿ ಸ್ಥಗಿತಗೊಳಿಸಿ ಈಗ ರಿಯಾಯಿತಿ ದರ ಕೇಳುತ್ತೀರಾ?: ಭಾರತಕ್ಕೆ ರಷ್ಯಾ ಶಾಕ್

putin and modi
11/03/2026

ಉಕ್ರೇನ್ ಯುದ್ಧದ ಸಮಯದಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳ ವಿರೋಧದ ನಡುವೆಯೂ ರಷ್ಯಾದಿಂದ ತೈಲ ಖರೀದಿಸಿ ಆ ದೇಶಕ್ಕೆ ಬೆಂಬಲ ನೀಡಿದ್ದ ಭಾರತಕ್ಕೆ ರಷ್ಯಾ ಈಗ ಶಾಕ್ ನೀಡಿದೆ. ಇನ್ನು ಮುಂದೆ ಭಾರತಕ್ಕೆ ರಿಯಾಯಿತಿ ದರದಲ್ಲಿ ಕಚ್ಚಾ ತೈಲ ನೀಡುವುದಿಲ್ಲ ಎಂದು ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸ್ಪಷ್ಟಪಡಿಸಿದ್ದಾರೆ.

ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ 2022ರ ನಂತರ ಮೊದಲ ಬಾರಿಗೆ ಪ್ರತಿ ಬ್ಯಾರೆಲ್‌ ಗೆ 100 ಡಾಲರ್‌ ಗೆ ತಲುಪಿದೆ. ಈ ಪರಿಸ್ಥಿತಿಯ ಲಾಭ ಪಡೆಯಲು ರಷ್ಯಾ ಮುಂದಾಗಿದೆ.

“ಮಾಹಿತಿ ನೀಡದೆ ಏಕಾಏಕಿ ತೈಲ ಖರೀದಿಯನ್ನು ಸ್ಥಗಿತಗೊಳಿಸಿ, ಈಗ ಮತ್ತೆ ರಿಯಾಯಿತಿ ಕೇಳುತ್ತಿದ್ದೀರಾ?” ಎಂದು ಪುಟಿನ್ ಭಾರತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.

ಇನ್ನು ಮುಂದೆ ಭಾರತದೊಂದಿಗಿನ ತೈಲ ವ್ಯವಹಾರವು ಸಂಪೂರ್ಣವಾಗಿ ವಾಣಿಜ್ಯ ನೆಲೆಯಲ್ಲಿ (Commercial basis) ನಡೆಯಲಿದೆ. ಯಾವುದೇ ವಿಶೇಷ ರಿಯಾಯಿತಿಗಳು ಇರುವುದಿಲ್ಲ ಎಂಬ ಖಡಕ್ ಸಂದೇಶವನ್ನು ಪುಟಿನ್ ರಷ್ಯಾದ ಅಧಿಕಾರಿಗಳಿಗೆ ರವಾನಿಸಿದ್ದಾರೆ.

ಇತ್ತೀಚೆಗಷ್ಟೇ ಅಮೆರಿಕವು ರಷ್ಯಾದಿಂದ ತೈಲ ಖರೀದಿಸಲು ಭಾರತಕ್ಕೆ 30 ದಿನಗಳ ಕಾಲಾವಕಾಶ ನೀಡಿತ್ತು.  ಈ ಬೆಳವಣಿಗೆಯಿಂದಾಗಿ ಮುಂಬರುವ ದಿನಗಳಲ್ಲಿ ಭಾರತದಲ್ಲಿ ಇಂಧನ ದರಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ