ಚಂಡಮಾರುತ ಬಂದರೂ ನನ್ನ ಫೋಟೋ ಸೇಫ್ ಮಾಡಿ ಇಡಬೇಕು: ಉತ್ತರ ಕೊರಿಯಾ‌ ಜನರಿಗೆ ಸರ್ವಾಧಿಕಾರಿ ಕಿಮ್ ಜಾಂಗ್ ಸೂಚನೆ - Mahanayaka
12:10 PM Wednesday 22 - October 2025

ಚಂಡಮಾರುತ ಬಂದರೂ ನನ್ನ ಫೋಟೋ ಸೇಫ್ ಮಾಡಿ ಇಡಬೇಕು: ಉತ್ತರ ಕೊರಿಯಾ‌ ಜನರಿಗೆ ಸರ್ವಾಧಿಕಾರಿ ಕಿಮ್ ಜಾಂಗ್ ಸೂಚನೆ

14/08/2023

ಉತ್ತರ ಕೊರಿಯ ದೇಶದ ಜನರಿಗೆ ಸರ್ವಾಧಿಕಾರಿ ಕಿಮ್-ಜಾಂಗ್-ಉನ್ ಆಡಳಿತವು ಇದೀಗ ಹೊಸ ಟಾಸ್ಕ್ ವೊಂದನ್ನು ನೀಡಿದೆ. ಖನೂನ್ ಎಂಬ ಚಂಡಮಾರುತ ಉತ್ತರ ಕೋರಿಯಾದತ್ತ ನುಗ್ಗುತ್ತಿದೆ. ಈ ಸಂದರ್ಭದಲ್ಲಿ ಜನರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಪ್ರಥಮ ಆದ್ಯತೆ ನೀಡುವ ಬದಲು ಕಿಮ್-ಜಾಂಗ್-ಉನ್ ಆತನ ತಂದೆ ಕಿಮ್-ಜಾಂಗ್-ಇಲ್ ಹಾಗೂ ಉತ್ತರ ಕೊರಿಯಾದ ಜನಕನೆಂದೇ ಖ್ಯಾತನಾಗಿರುವ ಕಿಮ್ II- ಸುಂಗ್ ಅವರ ಪ್ರತಿಕೃತಿಗಳು, ಪೋಸ್ಟರ್ ಗಳು ಹಾಗೇ ಪ್ರತಿಮೆಗಳನ್ನು ರಕ್ಷಿಸುಂತೆ ಆದೇಶ ನೀಡಲಾಗಿದೆ.

ಇದನ್ನೂ ಮೀರಿ ಒಂದು ವೇಳೆ ದೇಶದ ಯಾವುದೇ ಭಾಗದಲ್ಲಿ ಕಿಮ್ ವಂಶಕ್ಕೆ ಸಂಬಂಧಿಸಿದ ಯಾವುದೇ ಸ್ಮಾರಕ ಅಥವಾ ಪೋಸ್ಟರ್ ಗಳಿಗೆ ಆಕಸ್ಮಿಕವಾಗಿಯಾದರೂ ಹಾನಿಯಾದಲ್ಲಿ ಅದರ ಪರಿಣಾಮ ಗಂಭೀರವಾಗಿರಲಿದೆ. ಇದು ಮರಣದಂಡನೆ ಶಿಕ್ಷೆವರೆಗೂ ಹೋಗಬಹುದು ಎಂದು ಸೂಚಿಸಲಾಗಿದೆ.

ಉತ್ತರ ಕೊರಿಯದಾದ್ಯಂತ ಭಾರೀ ಬಿರುಗಾಳಿ ಸಹಿತ ಮಳೆ ಸುರಿಯವ ಮುನ್ನೆಚ್ಚರಿಕೆಯನ್ನು ನೀಡಲಾಗಿದೆ. ಇಲ್ಲಿನ ಆಡಳಿತಾರೂಢ ಕೊರಿಯನ್ ವರ್ಕರ್ಸ್ ಪಾರ್ಟಿಯ ಅಧಿಕೃತ ಸುದ್ದಿ ಪತ್ರಿಕೆ, ರೊಡಾಂಗ್ ಸಿನ್ಮುನ್ ನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿರುವ ಕಿಮ್ ವಂಶದ ಎಲ್ಲಾ ರೀತಿಯ ಸ್ಮಾರಕ ವಸ್ತುಗಳಿಗೆ ರಕ್ಷಣೆ ಒದಗಿಸುವಂತೆ ಅಲ್ಲಿನ ನಾಗರಿಕರಿಗೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.

ಇತ್ತೀಚಿನ ಸುದ್ದಿ