ಫೆಲೆಸ್ತೀನ್ ಗೆ ನಾರ್ವೇ, ಐರ್ಲ್ಯಾಂಡ್ ಮತ್ತು ಸ್ಪೇನ್ ಬೆಂಬಲ: ಇಸ್ರೇಲ್ ಗೆ ಉರಿ ಶುರು..!

ನಾರ್ವೇ, ಐರ್ಲ್ಯಾಂಡ್ ಮತ್ತು ಸ್ಪೇನ್ ದೇಶಗಳು ಇಂದು ಫೆಲೆಸ್ತೀನ್ ಅನ್ನು ಒಂದು ದೇಶವೆಂದು ಘೋಷಿಸಿವೆ. ಈ ಕ್ರಮ ಫೆಲೆಸ್ತೀನೀಯರ ಹರ್ಷಕ್ಕೆ ಕಾರಣವಾದರೆ ಇಸ್ರೇಲ್ ಅದನ್ನು ಖಂಡಿಸಿದೆ ಹಾಗೂ ನಾರ್ವೇ ಮತ್ತು ಐರ್ಲ್ಯಾಂಡ್‌ನಿಂದ ತನ್ನ ರಾಯಭಾರಿಗಳನ್ನು ವಾಪಸ್ ಕರೆಸಿದೆ.
ನಾರ್ವೇ ದೇಶವು ಯುರೋಪಿಯನ್ ಯೂನಿಯನ್ ಸದಸ್ಯನಾಗಿರದೇ ಇದ್ದರೂ ಇಸ್ರೇಲ್ ಮತ್ತು ಫೆಲೆಸ್ತೀನ್ ನಡುವೆ ಎರಡು ರಾಷ್ಟ್ರ ರಚನೆ ಪರಿಹಾರ ಅಗತ್ಯ ಎಂಬುದನ್ನು ಬಲವಾಗಿ ಸಮರ್ಥಿಸುತ್ತಾ ಬಂದಿದೆ.
ನಾರ್ವೇ ದೇಶದ ಪ್ರಧಾನಿಯ ಹೇಳಿಕೆಯ ಬೆನ್ನಲ್ಲೇ ಐರಿಷ್ ಪ್ರಧಾನಿ ಸೈಮನ್ ಹ್ಯಾರಿಸ್ ಕೂಡ ಇಂತಹುದೇ ಘೋಷಣೆ ಮಾಡಿದರಲ್ಲದೆ ಇಂದು ಫೆಲೆಸ್ತೀನ್ ಮತ್ತು ಐರ್ಲ್ಯಾಂಡ್ ಪಾಲಿಗೆ ಐತಿಹಾಸಿಕ ದಿನ ಎಂದು ಹೇಳಿದರು. ಎರಡು ರಾಷ್ಟ್ರ ಪರಿಹಾರದ ಮೂಲಕ ಇಸ್ರೇಲ್-ಫೆಲೆಸ್ತೀನ್ ಸಂಘರ್ಷಕ್ಕೆ ಅಂತ್ಯ ಹಾಡಲು ಈ ಕ್ರಮ ಸಹಕಾರಿ ಎಂದು ಅವರು ಹೇಳಿದರು.
ಇನ್ನೊಂದು ಬೆಳವಣಿಗೆಯಲ್ಲಿ ಸ್ಪೇನ್ ಪ್ರಧಾನಿ ಪೆಡ್ರೋ ಸಾಂಚೆಝ್ ಹೇಳಿಕೆ ನೀಡಿ ತಮ್ಮ ದೇಶ ಮೇ 28ರಿಂದ ಫೆಲೆಸ್ತೀನ್ ಅನ್ನ ಒಂದು ರಾಷ್ಟ್ರವೆಂದು ಪರಿಗಣಿಸುವುದಾಗಿ ತಿಳಿಸಿದರು. ಫೆಲೆಸ್ತೀನ್‌ಗೆ ಸ್ವತಂತ್ರ ರಾಷ್ಟ್ರ ಮಾನ್ಯತೆಗಾಗಿ ಪೆಡ್ರೋ ಈಗಾಗಲೇ ಹಲವು ಯುರೋಪಿಯನ್ ಮತ್ತು ಮಧ್ಯಪೂರ್ವ ದೇಶಗಳಿಗೆ ಭೇಟಿ ನೀಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth