ಹೇಮಂತ್ ಕರ್ಕರೆ ಹತ್ಯೆಗೆ ಕಸಬ್ ಕಾರಣ ಅಲ್ಲ: ಆರ್ ಎಸ್ ಎಸ್ ನಂಟು ಇದೆ ಎಂದ ಕಾಂಗ್ರೆಸ್ ನಾಯಕ..! - Mahanayaka
12:57 AM Saturday 23 - August 2025

ಹೇಮಂತ್ ಕರ್ಕರೆ ಹತ್ಯೆಗೆ ಕಸಬ್ ಕಾರಣ ಅಲ್ಲ: ಆರ್ ಎಸ್ ಎಸ್ ನಂಟು ಇದೆ ಎಂದ ಕಾಂಗ್ರೆಸ್ ನಾಯಕ..!

05/05/2024


Provided by

26/11ರ ಮುಂಬೈ ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ರಾಜ್ಯ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಮಾಜಿ ಮುಖ್ಯಸ್ಥ ಹೇಮಂತ್ ಕರ್ಕರೆ ಅವರನ್ನು ಹತ್ಯೆ ಮಾಡಿದ್ದು ಭಯೋತ್ಪಾದಕ ಅಜ್ಮಲ್ ಕಸಬ್ ಅಲ್ಲ. ಆರ್ ಎಸ್ಎಸ್ ಸಂಯೋಜಿತ ಪೊಲೀಸರು ಎಂದು ಮಹಾರಾಷ್ಟ್ರ ವಿರೋಧ ಪಕ್ಷದ ನಾಯಕ ವಿಜಯ್ ನಾಮದೇವರಾವ್ ವಾಡೆಟ್ಟಿವಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮುಂಬೈ ಉತ್ತರ ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಜ್ವಲ್ ನಿಕ್ಕಂ ವಿರುದ್ಧ ಕಾಂಗ್ರೆಸ್ ಮುಖಂಡ ವಿಜಯ್ ವಾಡೆಟ್ಟಿವಾರ್ ವಾಗ್ದಾಳಿ ನಡೆಸಿದ್ದಾರೆ. ಅಜ್ಮಲ್ ಕಸಬ್ ಗೆ ಮರಣದಂಡನೆ ವಿಧಿಸಿದ 26/11 ಭಯೋತ್ಪಾದಕ ದಾಳಿಯ ವಿಚಾರಣೆಯಲ್ಲಿ ನಿಕಮ್ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದರು.

ಬಿರಿಯಾನಿ ವಿಷಯವನ್ನು ಎತ್ತುವ ಮೂಲಕ ನಿಕಮ್ ಕಾಂಗ್ರೆಸ್ ಅನ್ನು ದೂಷಿಸಿದ್ದರು. ಕಸಬ್ ಗೆ ಯಾರಾದರೂ ಬಿರಿಯಾನಿ ಕೊಡುತ್ತಾರಾ..? ನಂತರ ಉಜ್ವಲ್ ನಿಕಮ್ ಅದನ್ನು ಒಪ್ಪಿಕೊಂಡಿದ್ದರು. ಅವರು ಯಾವ ರೀತಿಯ ವಕೀಲರು, ನ್ಯಾಯಾಲಯದಲ್ಲಿ ಸಾಕ್ಷಿ ಹೇಳದ ದೇಶದ್ರೋಹಿ..? ಮುಂಬೈ ಪೊಲೀಸ್ ಅಧಿಕಾರಿ ಹೇಮಂತ್ ಕರ್ಕರೆ ಅವರ ಹತ್ಯೆಗೆ ಕಾರಣವಾದ ಗುಂಡು ಕಸಬ್ ನ ಬಂದೂಕಿನಿಂದ ಹಾರಿಸಲ್ಪಟ್ಟಿಲ್ಲ, ಆದರೆ ಆ ಸಮಯದಲ್ಲಿ ಆರ್ ಎಸ್ ಎಸ್ ಗೆ ನಿಷ್ಠರಾಗಿರುವ ಪೊಲೀಸ್ ಅಧಿಕಾರಿಯಿಂದ ಹಾರಿಸಲಾಗಿದೆ. ಈ ಸತ್ಯವನ್ನು ನ್ಯಾಯಾಲಯದಿಂದ ಮರೆಮಾಚಿದ ದೇಶದ್ರೋಹಿಗೆ ಬಿಜೆಪಿ ಟಿಕೆಟ್ ನೀಡುತ್ತಿದೆ. ಬಿಜೆಪಿ ಈ ದೇಶದ್ರೋಹಿಗಳನ್ನು ಯಾಕೆ ಬೆಂಬಲಿಸುತ್ತಿದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ” ಎಂದು ವಾಡೆಟ್ಟಿವಾರ್ ಹೇಳಿದ್ದಾರೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ