ನೊಟೀಸ್ ನೀಡದೆ ಕೃಷಿ ಭೂಮಿ ತೆರವು: ಅರಣ್ಯಾಧಿಕಾರಿಗಳ ವಿರುದ್ಧ ರೈತರ ಆಕ್ರೋಶ - Mahanayaka

ನೊಟೀಸ್ ನೀಡದೆ ಕೃಷಿ ಭೂಮಿ ತೆರವು: ಅರಣ್ಯಾಧಿಕಾರಿಗಳ ವಿರುದ್ಧ ರೈತರ ಆಕ್ರೋಶ

krishi bhumi
07/03/2022


Provided by

ತುಮಕೂರು: ಅರಣ್ಯ ಅಧಿಕಾರಿಗಳು ನೊಟೀಸ್‌ ನೀಡದೆ ಏಕಾಏಕಿ ಕೃಷಿ ಭೂಮಿ ತೆರವು ಕಾರ್ಯಚರಣೆ ಮಾಡುತ್ತಿರುವ ಕ್ರಮದಿಂದ ಜಿಲ್ಲೆಯ ಗುಬ್ಬಿ ತಾಲೂಕಿನ ಅಮ್ಮನಘಟ್ಟದಲ್ಲಿ ರೈತರು ಕಂಗಾಲಾಗಿದ್ದಾರೆ.

ಜಮೀನಿನ ರೈತನಿಗೆ ಯಾವುದೇ ನೋಟಿಸ್ ನೀಡದೆ ಏಕಾಏಕಿ ಫಸಲು ನೀಡುತ್ತಿದ್ದ ನೂರಕ್ಕೂ ಹೆಚ್ಚು ಅಡಿಕೆ, ತೆಂಗು ಮರಗಳನ್ನು ತೆರವುಗೊಳಿಸಲಾಗಿದೆ. ಅಮ್ಮನಘಟ್ಟ ಗ್ರಾಮದ ಸರ್ವೆ ನಂಬರ್ 116, ಶಾರದಮ್ಮ ಬಿನ್ ದಿವಂಗತ ದೊಡ್ಡತಿಮ್ಮಯ್ಯ ಎಂಬುವರಿಗೆ ಸೇರಿದ ಜಮೀನನ್ನು ಮೀಸಲು ಅರಣ್ಯ ಪ್ರದೇಶ ಎಂದು ವಲಯ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸ್ ಭದ್ರತೆಯಲ್ಲಿ ತೆರವುಗೊಳಿಸಲಾಗಿದೆ.

ರೈತ ಮಹಿಳೆ ಶಾರದಮ್ಮ‌ ಕೋರ್ಟ್​ಗೆ ಮೊರೆ ಹೋಗಿದ್ದು,ತಡೆ ಅರ್ಜಿಯನ್ನು ಸೋಮವಾರ ತೊರಿಸುತ್ತೇವೆ ಎಂದರೂ ಬಿಡದೇ ಅರಣ್ಯ ಅಧಿಕಾರಿಗಳು ಅಡಿಕೆ, ತೆಂಗು ಮರಗಳನ್ನು ತೆರವುಗೊಳಿಸಿದ್ದಾರೆ. ಭಾನುವಾರ‌ ಏಕಾಏಕಿ ಬಂದು ತೆರವು ಕಾರ್ಯ ಮಾಡಿರೋದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದ್ದು, ಇದೊಂದು ಉದ್ದೇಶ ಪೂರ್ವಕವಾಗಿ ನಡೆದ ಕೃತ್ಯ ಎಂದು ರೈತ ಕುಟುಂಬ ಗಂಭೀರ ಆರೋಪ ಮಾಡಿದೆ.

ಕಳೆದ ಹತ್ತಾರು ವರ್ಷಗಳ ಹಿಂದೆ ಅರಣ್ಯಧಿಕಾರಿಗಳು ಸರ್ವೆ ಕಲ್ಲನ್ನು ಹಾಕಿದ್ದರು. ನಿನ್ನೆ ಯಾವುದೇ ಮಾಹಿತಿ‌ ನೀಡದೆ ನೂರಕ್ಕೂ ಹೆಚ್ಚು ಅಡಿಕೆ, ತೆಂಗಿ ತೆರವುಗೊಳಿಸಿದ್ದಾರೆ. ಅರಣ್ಯ ಅಧಿಕಾರಿಗಳದ್ದು ಸರ್ವಾಧಿಕಾರಿ ಧೋರಣೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಅತ್ಯಾಚಾರ ಆರೋಪ: ಕೇರಳದ ಸಿನಿಮಾ ನಿರ್ದೇಶಕ ಲಿಜು ಕೃಷ್ಣ ಬಂಧನ

ಎಂಜಿನ್ ಕೆಟ್ಟಿರುವ ಡಬ್ಬಾ ಸರ್ಕಾರ: ಸಿದ್ದರಾಮಯ್ಯ

ಪ್ರತಿಭಟನಾ ನಿರತ ಹಿಂದೂ ಕಾರ್ಯಕರ್ತರ ಮೇಲೆ ಜೇನು ದಾಳಿ

ಎನ್‌ ಎಸ್‌ ಇ ಮಾಜಿ ಸಿಇಒ ಚಿತ್ರಾ ರಾಮಕೃಷ್ಣ ಬಂಧನ

ಭಾರತದ ಪ್ಯಾಲೆಸ್ಟೈನ್​​​ ರಾಯಭಾರಿ ಮುಕುಲ್ ಆರ್ಯ ನಿಗೂಢ ಸಾವು

 

ಇತ್ತೀಚಿನ ಸುದ್ದಿ