10 ದಿನದಲ್ಲಿ ಹೃದಯಾಘಾತಕ್ಕೆ ಬಲಿಯಾದವರ ಸಂಖ್ಯೆ 5: ಬಲಿಯಾದವರೆಲ್ಲ ಸಣ್ಣ ವಯಸ್ಸಿನವರು! - Mahanayaka
3:39 AM Friday 19 - September 2025

10 ದಿನದಲ್ಲಿ ಹೃದಯಾಘಾತಕ್ಕೆ ಬಲಿಯಾದವರ ಸಂಖ್ಯೆ 5: ಬಲಿಯಾದವರೆಲ್ಲ ಸಣ್ಣ ವಯಸ್ಸಿನವರು!

heart attack
04/03/2023

ತೆಲಂಗಾಣ: ಹಠಾತ್ ಹೃದಯಾಘಾತ ಮತ್ತು ಸಾವು ಪ್ರಕರಣ ದೇಶಾದ್ಯಂತ ಆತಂಕವನ್ನುಂಟು ಮಾಡಿದ್ದು, ಸಣ್ಣ ವಯಸ್ಸಿನ ಯುವಕರು ಹಠಾತ್ ಹೃದಯಾಘಾತಕ್ಕೊಳಗಾಗುತ್ತಿದ್ದಾರೆ. ತೆಲಂಗಾಣ ರಾಜ್ಯದಲ್ಲಿ ಕಳೆದ 10 ದಿನಗಳ ಅವಧಿಯಲ್ಲಿ 5 ಹೃದಯಾಘಾತ ಪ್ರಕರಣಗಳು ವರದಿಯಾಗಿವೆ.

ಶುಕ್ರವಾರ ತನ್ನ  ಸ್ನೇಹಿತನೊಂದಿಗೆ ಸಿಎಂ ಆರ್ ಎಂಜಿನಿಯರಿಂಗ್ ಕಾಲೇಜಿನ ಬಿಟೆಕ್ ಮೊದಲ ವರ್ಷದ ವಿದ್ಯಾರ್ಥಿ ಸಚಿನ್ (18 ವರ್ಷ) ನಡೆದುಕೊಂಡು ಹೋಗುತ್ತಿದ್ದ ವೇಳೆ ಕಾರಿಡಾರ್ ನಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದ.

ಇನ್ನೊಂದು ಘಟನೆಯಲ್ಲಿ ಹೈದರಾಬಾದ್ ನ ಲಾಲಾಪೇಟ್ ಪ್ರದೇಶದ ಪ್ರೊ.ಜಯಶಂಕರ್ ಕ್ರೀಡಾಂಗಣದಲ್ಲಿ ಬ್ಯಾಡ್ಮಿಂಟನ್ ಆಡುತ್ತಿದ್ದ ಶ್ಯಾಮ್ ಯಾದವ್ (38) ಕುಸಿದು ಬಿದ್ದು ಮೃತಪಟ್ಟಿದ್ದ.

ಫೆಬ್ರವರಿ 27ರಂದು ನಿರ್ಮಲ್ ಜಿಲ್ಲೆಯ ಫರ್ಡಿ ಗ್ರಾಮದಲ್ಲಿ 19 ವರ್ಷದ ಯುವಕ ತನ್ನ ಸಂಬಂಧಿಕರ ಮದುವೆ ಕಾರ್ಯಕ್ರಮದಲ್ಲಿ ಡಾನ್ಸ್ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದ.

ನಾಲ್ಕು ದಿನಗಳ ಹಿಂದೆ 24 ವರ್ಷ ವಯಸ್ಸಿನ ಪೊಲೀಸ್ ಪೇದೆಯೊಬ್ಬರು ಹೈದರಾಬಾದ್ ನ ಜಿಮ್ ನಲ್ಲಿ ವ್ಯಾಯಾಮ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದರು.

ಫೆಬ್ರವರಿ 20ರಂದು ನಗರದ ಕಲಾಪತ್ಥರ್ ಪ್ರದೇಶದ ಮಧ್ಯವಯಸ್ಕರೊಬ್ಬರು ತಮ್ಮ ಅಳಿಯನಿಗೆ ಅರಿಶಿನ ಹಚ್ಚುತ್ತಿದ್ದ ವೇಳೆ ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿದ್ದರು.

ದೇಶಾದ್ಯಂತ ಕುಸಿದು ಬಿದ್ದು ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚಳವಾಗುತ್ತಿದೆ. ಆದರೆ ಇದನ್ನು ಆರೋಗ್ಯ ಇಲಾಖೆ ಯಾಕೆ ಗಂಭೀರವಾಗಿ ಪರಿಗಣಿಸುತ್ತಿಲ್ಲ ಅನ್ನೋ ಪ್ರಶ್ನೆಗಳು ವ್ಯಾಪಕವಾಗಿ ಕೇಳಿ ಬಂದಿವೆ. ಕೋವಿಡ್ ಬಳಿಕ ದೇಶದಲ್ಲಿ ಕುಸಿದು ಬಿದ್ದು ಮೃತಪಡುವ ಪ್ರಕರಣಗಳು ಹೆಚ್ಚಾಗಿವೆ ಅನ್ನೋ ಆರೋಪಗಳು ಕೇಳಿ ಬಂದಿವೆ. ಸಣ್ಣ ವಯಸ್ಸಿನ ಯುವಕರೇ ಹೃದಯಾಘಾತಕ್ಕೊಳಗಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ