ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ನ್ಯಾಯಾಲಯಕ್ಕೆ ಹಾಜರಾದ ಸಂತ್ರಸ್ತ ಯುವತಿ - Mahanayaka

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ನ್ಯಾಯಾಲಯಕ್ಕೆ ಹಾಜರಾದ ಸಂತ್ರಸ್ತ ಯುವತಿ

ramesh jarakiholi cd
30/03/2021


Provided by

ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿ ಇಂದು 24ನೇ ಎಪಿಎಂಸಿ ನ್ಯಾಯಾಧೀಶರ ಮುಂದೆ ಹಾಜರಾಗಿದ್ದಾರೆ ಎಂದು ಸಂತ್ರಸ್ತೆ ಪರ ವಕೀಲ ಜಗದೀಶ್ ತಿಳಿಸಿದ್ದಾರೆ.

ವಿಡಿಯೋ ಬಿಡುಗಡೆಯಾಗಿ 28 ದಿನಗಳ ಬಳಿಕ ಯುವತಿ ತನ್ನ ಹೇಳಿಕೆ ನೀಡಲಿದ್ದಾರೆ. ವಿಶೇಷ ಭದ್ರತೆಯಲ್ಲಿ ಕೋರ್ಟ್ ಗೆ ಬಂದಿದ್ದು, ಅಲ್ಲಿ ನ್ಯಾಯಾಧೀಶರ ಮುಂದೆ ಯುವತಿ ತನ್ನ ಹೇಳಿಕೆ ದಾಖಲಿಸಲಿದ್ದಾರೆ.

ಮುಖ್ಯ ನ್ಯಾಯಾಮೂರ್ತಿಗಳಿಗೆ ಇ-ಮೇಲ್ ಮೂಲಕ ಭಾನುವಾರ ಯುವತಿ ದೂರು ನೀಡಿದ್ದರು. ರಮೇಶ್‌ ಜಾರಕಿಹೊಳಿ ಪ್ರಭಾವಿ ವ್ಯಕ್ತಿಯಾಗಿದ್ದು, ಸಾರ್ವಜನಿಕವಾಗಿ ನನಗೆ ಬೆದರಿಕೆ ಹಾಕಿದ್ದಾರೆ. ಅಲ್ಲದೆ, ರಮೇಶ್‌ ಜಾರಕಿಹೊಳಿ ಮತ್ತು ಅವರ ಬೆಂಬಲಿಗರಿಂದ ಬೆದರಿಕೆ ಇದೆ. ನನ್ನ ಪೋಷಕರ ಮೂಲಕ ನನ್ನನ್ನು ನಿಯಂತ್ರಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.

ಎಸ್‌ ಐಟಿಯಿಂದ ನನಗೆ ಹಾಗೂ ನನ್ನ ಕುಟುಂಬಕ್ಕೆ ಯಾವುದೇ ರಕ್ಷಣೆ ಇಲ್ಲ. ತನಿಖಾ ಸಂಸ್ಥೆ ಮೇಲೆ ಮಾಜಿ ಸಚಿವರು ಪ್ರಭಾವ ಬೀರಿದ್ದಾರೆ. ಈಗಾಗಲೇ ಅವರು ಸಾಕ್ಷ್ಯ ನಾಶ ಪಡಿಸುತ್ತಿದ್ದಾರೆ ಎಂದು ಸಂತ್ರಸ್ತೆ ಹೇಳಿದ್ದಾರೆ.

ಈವರೆಗೆ ವಿಡಿಯೋ ಮೂಲಕವೇ ಹೇಳಿಕೆ ನೀಡಿದ್ದ ಸಂತ್ರಸ್ತ ಯುವತಿ ಇದೀಗ ನೇರವಾಗಿ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿದ್ದಾರೆ. ಎಸ್ ಐಟಿಯನ್ನುಆರೋಪಿ ರಮೇಶ್ ಜಾರಕಿಹೊಳಿ ನಿಯಂತ್ರಿಸುತ್ತಿದ್ದಾರೆ ಎಂದು ಯುವತಿ ಅನುಮಾನ ವ್ಯಕ್ತಪಡಿಸಿದ್ದಾರೆ.

ನಿಮಗೆ ಕೈ ಮುಗಿದು ಕೇಳುತ್ತೇನೆ, ಸಿಡಿ ವಿಚಾರ ನನ್ನನ್ನು ಏನೂ ಕೇಳಬೇಡಿ | ಸತೀಶ್ ಜಾರಕಿಹೊಳಿ ಮನವಿ

ಇತ್ತೀಚಿನ ಸುದ್ದಿ