ಒಡಿಶಾ ರೈಲು ದುರಂತ: ಶವಾಗಾರದಲ್ಲಿ ಜೀವಂತ ಮಗನನ್ನು ಹುಡುಕಿದ ತಂದೆ..!

ಇದು ಮನಕಲಕುವ ಘಟನೆ. ರೈಲು ದುರಂತದಲ್ಲಿ ತನ್ನ ಮಗ ಸತ್ತಿಲ್ಲ ಎಂಬ ದೃಢ ವಿಶ್ವಾಸದಲ್ಲಿದ್ದ ಕೋಲ್ಕತ್ತಾದ ಬಿಶ್ವಜಿತ್ ಮಾಲಿಕ್ ಎಂಬ ಅಪ್ಪ 200 ಕಿಲೋ ಮೀಟರ್ ಗಿಂತಲೂ ಅಧಿಕ ದೂರ ಸಂಚರಿಸಿ ಅಪಘಾತದ ಸ್ಥಳಕ್ಕೆ ಬಂದಿದ್ದಾರೆ. ಅಲ್ಲಿಂದ ಆಸ್ಪತ್ರೆಗೆ ತೆರಳಿ ತನ್ನ ಮಗನನ್ನು ಹುಡುಕಿದ್ದಾರೆ.
ಅಲ್ಲಿ ಎಲ್ಲೂ ಕಾಣದಿದ್ದಾಗ ಶವಗಳನ್ನು ಇಡಲಾಗಿರುವ ಬಹಾನಗ ಹೈಸ್ಕೂಲಿಗೆ ಹೋಗಿದ್ದಾರೆ. ಅಲ್ಲಿ ಅಷ್ಟೂ ಶವಗಳ ನಡುವೆ ಅವರ ಮಗ ಜೀವಂತ ಇದ್ದ. ಈಗ ಆತನನ್ನು ಕಟಕ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೌದು. ಹೇಲಾರಾಮ್ ಮಾಲಿಕ್ ಎಂಬ ಈ ಅಪ್ಪ ತನ್ನ ಪುತ್ರ ವಿಶ್ವಜಿತ್ ಮಲಿಕ್‌ನನ್ನು ಕೋರಮಂಡಲ್ ಎಕ್ಸ್ ಪ್ರೆಸ್ ರೈಲಿಗೆ ಹತ್ತಿಸಿ ವಾಪಸ್ ಆದ ಕೆಲವೇ ಗಂಟೆಗಳಲ್ಲಿ ರೈಲು ಅಪಘಾತದ ಸುದ್ದಿ ಗೊತ್ತಾಯಿತು. ವ್ಯಾಪಾರಿಯಾಗಿರುವ ಹೇಲಾರಾಮ್ ತಕ್ಷಣ 24 ವರ್ಷದ ಪುತ್ರನಿಗೆ ಕರೆ ಮಾಡಿದ್ದಾನೆ. ಆಗ ಕರೆ ಸ್ವೀಕರಿಸಿದ್ದ ವಿಶ್ವಜಿತ್ ತೀರ ತಗ್ಗಿದ ಧ್ವನಿಯಲ್ಲಿ ಮಾತಾಡಿದ್ದ.
ಆತ ಜೀವಂತ ಇದ್ದಾನೆ ಅನ್ನುವುದನ್ನು ಖಚಿತಪಡಿಸಿಕೊಂಡ ತಂದೆ ಸ್ಥಳೀಯ ಆಂಬುಲೆನ್ಸ್ ಚಾಲಕ ಪಾಲಷ್ ಪಂಡಿತ್ ಎಂಬಾತನನ್ನು ಸಂಪರ್ಕಿಸಿ ಕಿ.ಮೀ. ದೂರದ ಅಪಘಾತ ಸ್ಥಳಕ್ಕೆ ಧಾವಿಸಿದ್ದಾರೆ. ಜೊತೆಗೆ ತನ್ನ ಮೈದುನನನ್ನು ಸೇರಿಸಿಕೊಂಡಿದ್ದಾರೆ. ಹೀಗೆ ಅಪಘಾತ ಸ್ಥಳಕ್ಕೆ ಬಂದರೂ ಮಗ ಕಾಣಿಸಲಿಲ್ಲ. ಪ್ರಶ್ನಿಸಿದಾಗ ಆತ ಆಸ್ಪತ್ರೆಯಲ್ಲಿರಬಹುದು ಎಂದು ತಿಳಿಸಲಾಗಿದೆ.
ಹಾಗೆ ಆಸ್ಪತ್ರೆಯಲ್ಲಿ ಹುಡುಕಿದರೂ ಅವರಿಗೆ ಮಗ ಕಾಣಿಸಲಿಲ್ಲ. ಹಾಗೆ ಮೃತದೇಹಗಳನ್ನು ಇರಿಸಲಾದ ಹೈಸ್ಕೂಲ್ ಗೆ ತೆರಳುವಂತೆ ಅವರಿಗೆ ಸೂಚಿಸಲಾಗಿದೆ. ಅಲ್ಲಿ ತಾತ್ಕಾಲಿಕ ಶವಗಾರದಲ್ಲಿ ಹಲವಾರು ಜನರು ತಮ್ಮವರಿಗಾಗಿ ಹುಡುಕುತ್ತಿದ್ದರು. ಆದರೆ ಅದಾಗಲೇ ಒಂದು ಮೃತ ದೇಹದ ಕೈ ಅದುರುತ್ತಿರುವುದನ್ನು ಕಂಡು ಜನ ಬೊಬ್ಬೆ ಹಾಕಿದರು. ಅಲ್ಲಿಗೆ ಹೇಲಾರಾಮ್ ಧಾವಿಸಿದಾಗ ಆತ ತನ್ನ ಮಗ ಎಂದು ಗೊತ್ತಾಗಿದೆ ಎಂದು ಟೈಮ್ ಆಫ್ ಇಂಡಿಯಾ ವರದಿ ಮಾಡಿದೆ.
ಆತನನ್ನು ತಕ್ಷಣ ಆಂಬುಲೆನ್ಸ್ ಗೆ ಹಾಕಿ ಕಟಕ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿದೆ. ಆತನ ಸ್ಥಿತಿ ಗಂಭೀರವಾಗಿದ್ದರೂ ಸ್ಥಿರವಾಗಿದೆ. ಈಗಾಗಲೇ ಮೊಣಕಾಲಿಗೆ ಶಸ್ತ್ರಕ್ರಿಯೆ ನಡೆಸಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw