ಒಡಿಶಾ ರೈಲು ದುರಂತ: 300 ಮಂದಿಯ ರಕ್ಷಣೆಗೆ ಸಾಥ್ ನೀಡಿದ ಯುವಕ

ಒಡಿಶಾದ ಬಾಲಸೋರ್ ಬಳಿ ಸಂಭವಿಸಿದ ದೇಶದ ಅತಿ ದೊಡ್ಡ ಭೀಕರ ರೈಲು ಅಪಘಾತದಲ್ಲಿ 250ಕ್ಕೂ ಹೆಚ್ಚು ಸಾವುಗಳು ಸಂಭವಿಸಿದ್ದು, 900ಕ್ಕೂ ಹೆಚ್ಚು ಜನರು ಇನ್ನೂ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಅಪಘಾತದ ಸ್ಥಳಕ್ಕೆ ಧಾವಿಸಿದ ಎಲ್ಲರಲ್ಲಿಯೂ ಇದ್ದದ್ದು ಒಂದೇ ಪ್ರಾರ್ಥನೆ. ಪ್ರತಿಯೊಂದು ಜೀವವನ್ನೂ ಉಳಿಸಬೇಕು ಎಂಬುದು. ಅನೇಕ ಮಂದಿ, ಅನೇಕ ಸಂಘ ಸಂಸ್ಥೆಗಳು ತಮ್ಮ ಕೆಲಸಗಳನ್ನು ಬದಿಗೊತ್ತಿ ಜೀವವನ್ನು ಉಳಿಸುವ ಕಾಯಕದಲ್ಲಿ ತೊಡಗಿದೆ.
ಈ ಮಧ್ಯೆ ಅಪಘಾತ ಸಂಭವಿಸಿದ ಕ್ಷಣಮಾತ್ರದಲ್ಲಿ ಸ್ಥಳಕ್ಕೆ ಧಾವಿಸಿ ಸುಮಾರು 200 ರಿಂದ 300 ಜನರ ಜೀವ ಉಳಿಸಲು ಕಾರಣವಾಗಿದ್ದಾರೆ ಸ್ಥಳೀಯ ನಿವಾಸಿ ಗಣೇಶ್. ಇವರ ಸಾಹಸಕ್ಕೆ ಇದೀಗ ಎಲ್ಲೆಡೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ತಾವು ಮಾಡಿದ ರಕ್ಷಣಾ ಕಾರ್ಯದ ಕುರಿತು ಸುದ್ದಿ ಏಜೆನ್ಸಿಯೊಂದಿಗೆ ಮಾತನಾಡಿದ ಗಣೇಶ್ ಅವರು, ಮೊದಲಿಗೆ ಭಯಂಕರವಾದ ಶಬ್ದವು ಕೇಳಿ ಕೈಕಾಲುಗಳು ನಡುಗಿದವು. ಇದಾದ ನಂತರ ದೊಡ್ಡ ಅಪಘಾತ ಸಂಭವಿಸಿದೆ ಎಂದು ಅರ್ಥವಾಯಿತು. ಓಡಿಕೊಂಡು ಘಟನಾ ಸ್ಥಳಕ್ಕೆ ತಲುಪಿದಾಗ ಕೆಲಕಾಲ ಎಲ್ಲಿಗೆ ಹೋಗಬೇಕು, ಯಾರಿಗೆ ಸಹಾಯ ಮಾಡಬೇಕೆಂದು ಎಂಬುದೇ ಅರ್ಥವಾಗಲಿಲ್ಲ. ಎಲ್ಲೆಲ್ಲೂ ಮಂಜು ಕವಿದಿತ್ತು. ರಕ್ತದ ಓಕುಳಿ ಹರಿದಿತ್ತು. ಅಲ್ಲಿ ಜನರು ನರಳುತ್ತಿದ್ದರು. ತಡ ಮಾಡದೆ ಬೋಗಿಯೊಂದಕ್ಕೆ ನುಗ್ಗಿ ಜನರನ್ನು ಹೊರತರಲು ಆರಂಭಿಸಿದೆ. ಸಿಕ್ಕಿಬಿದ್ದವರನ್ನು ಹೇಗೋ ಹೊರಗೆ ತರಲಾಯಿತು ಎಂದು ಗಣೇಶ್ ತಿಳಿಸಿದ್ದಾರೆ.
ಅಷ್ಟರಲ್ಲಾಗಲೇ ಇನ್ನೂ ಅನೇಕರು ಬಂದರು. ಎಲ್ಲರೂ ರಕ್ಷಣೆಗೆ ಕೈಜೋಡಿಸಿದರು ಎಂದು ಅವರು ಹೇಳಿದ್ದಾರೆ. ಈ ಮೂಲಕ ಗಣೇಶ್ ಅವರು 200–300 ಜನರ ಪ್ರಾಣ ರಕ್ಷಣೆಗೆ ನೆರವಾಗಿದ್ದಾರೆ ಎಂದು ಎಎನ್ ಐ ಸುದ್ದಿಸಂಸ್ಥೆಯು ಟ್ವೀಟ್ ಮಾಡಿದೆ.
ಗಾಯಾಳುಗಳಿಗೆ ರಕ್ತದ ಅಗತ್ಯವಿದ್ದು, ರಕ್ತ ನೀಡಲು ಜನ ಸಾಲು ಸಾಲಾಗಿ ಮುಂದೆ ಬಂದಿದ್ದಾರೆ. ಈ ಮೂಲಕ ನೋವಿನಲ್ಲೂ ಮಾನವೀಯತೆ ಮೆರೆದ ಮಂದಿ ಅನೇಕರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw