ಪ್ರಮೋಷನ್ ಆಗಿ ಪದೋನ್ನತಿ ಸ್ವೀಕರಿಸಿದ ದಿನವೇ ಹೃದಯಾಘಾತದಿಂದ ಮೃತಪಟ್ಟ ಅಧಿಕಾರಿ!

05/09/2023
ಧಾರವಾಡ: ಪ್ರಮೋಷನ್ ಆಗಿ ಪದೋನ್ನತಿ ಸ್ವೀಕರಿಸಿದ ದಿನವೇ ಸರ್ಕಾರಿ ಅಧಿಕಾರಿಯೊಬ್ಬರು ಹೃದಯಾಘಾತದಿಂದ ನಿಧನರಾದ ಘಟನೆ ಧಾರವಾಡದಲ್ಲಿ ನಡೆದಿದೆ.
ಧಾರವಾಡ ಜಿಲ್ಲಾ ಖಜಾನೆ ಸಹಾಯಕ ನಿರ್ದೇಶಕ ಜಯಪ್ರಕಾಶ್ ಕಲಕೋಟಿ ಮೃತಪಟ್ಟವರಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕು ಖಜಾನೆ ಕಚೇರಿಯಲ್ಲಿದ್ದ ಜಯಪ್ರಕಾಶ್ ಅವರಿಗೆ 15 ದಿನಗಳ ಹಿಂದೆ ಅವರಿಗೆ ಪ್ರಮೋಷನ್ ಆಗಿ, ಸಹಾಯಕ ನಿರ್ದೇಶಕರಾಗಿ ಬಡ್ತಿ ಹೊಂದಿ ಜಿಲ್ಲಾ ಖಜಾನೆಗೆ ವರ್ಗಾವಣೆಯಾಗಿದ್ದರು. ಸೋಮವಾರ ಬೆಳ್ಳಿಗ್ಗೆ ಕಾರ್ಯಭಾರ ವಹಿಸಿಕೊಂಡಿದ್ದರು.
ಸೋಮವಾರ ಬೆಳಿಗ್ಗೆ ಕಚೇರಿಗೆ ಬಂದ ಅವರು ಎದೆನೋವು ಎಂದು ಹೇಳಿ ಹೋದರು. ಅವರನ್ನು ಎಸ್ ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದುರಾದೃಷ್ಟವಶಾತ್ ಹೃದಯಘಾತದಿಂದ ಅವರು ಸಂಜೆ ಮೃತಪಟ್ಟಿದ್ದಾರೆ.