ಆಫ್‍ಲೈನ್ ತರಗತಿಗೆ ಹೋಗುವಂತೆ ಪೋಷಕರು ಒತ್ತಾಯಿಸಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ - Mahanayaka
11:03 AM Saturday 23 - August 2025

ಆಫ್‍ಲೈನ್ ತರಗತಿಗೆ ಹೋಗುವಂತೆ ಪೋಷಕರು ಒತ್ತಾಯಿಸಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ

suicide
17/02/2022


Provided by

ಹೈದರಾಬಾದ್: ಪೋಷಕರು ಆಫ್‍ಲೈನ್ ತರಗತಿಗೆ ಹಾಜರಾಗುವಂತೆ ಒತ್ತಾಯಿಸಿದ್ದಕ್ಕೆ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಕೊಂಡಪಲ್ಲಿ ಮನೀಶಾ ಅಂಜು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಈಕೆ ಆಂಧ್ರಪ್ರದೇಶದ ವಿಜಯನಗರದ ರಾಜೀವ್ ಗಾಂಧಿ ಯೂನಿವರ್ಸಿಟಿ ಆಫ್ ನಾಲೆಡ್ಜ್ ಟೆಕ್ನಾಲಜೀಸ್‍ನಲ್ಲಿ (ಐಐಐಟಿ-ಶ್ರೀಕಾಕುಲಂ) ಓದುತ್ತಿದ್ದು, ಫೆ. 16ರಂದು ತನ್ನ ಹಾಸ್ಟೆಲ್ ಕೋಣೆಯಲ್ಲಿ ಆತ್ಮಹತ್ಯೆಗೆ ಮಾಡಿಕೊಂಡಿದ್ದಾಳೆ. ಈಕೆ ಕೊಠಡಿ ಒಳಗಿನಿಂದ ಬಾಗಿಲು ಲಾಕ್ ಆಗಿದ್ದನ್ನು ಗಮನಿಸಿದ ಕೆಲವು ವಿದ್ಯಾರ್ಥಿನಿಯರು ನಂತರ ಕಾಲೇಜು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಕಾಲೇಜಿನ ಅಧಿಕಾರಿಗಳು ಬಾಗಿಲು ಒಡೆದು ನೋಡಿದಾಗ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆಮಾಡಿಕೊಂಡಿರುವುದು ಕಂಡು ಬಂದಿದೆ. ಬಾಲಕಿಗೆ ಆಫ್‍ಲೈನ್ ತರಗತಿಗೆ ಹಾಜರಾಗುವಂತೆ ಪೋಷಕರು ಒತ್ತಾಯಿಸಿದ್ದರಿಂದ ಹುಡುಗಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.

ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ ಎಂದು ಎಚ್ಚರ್ಲ ಸಬ್‌ಇನ್ಸ್‌ಪೆಕ್ಟರ್‌ ಕೆ. ರಾಮು ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಸರ್ಕಾರಿ ನೌಕರನ ಎರಡನೇ ಪತ್ನಿಗೆ ಪಿಂಚಣಿ ಇಲ್ಲ | ಬಾಂಬೆ ಹೈಕೋರ್ಟ್

ಜಾಗಟೆ, ಗಂಟೆಯಿಂದ ಶಬ್ದ ಮಾಲಿನ್ಯ: ಆದೇಶ ವಾಪಸ್ ಪಡೆಯಲಾಗಿದೆ | ಅರಗ ಜ್ಞಾನೇಂದ್ರ 

ಮುಸ್ಲಿಂ ವೇಷ ಧರಿಸಿ ಅನುಮಾಸ್ಪದ ರೀತಿ ಓಡಾಟ: ಆರು ಮಂದಿ ಹಿಂದೂ ಧರ್ಮೀಯರು ಪೊಲೀಸ್‌ ವಶಕ್ಕೆ

13 ಅಪ್ರಾಪ್ತ ವಿದ್ಯಾರ್ಥಿನಿಯರ ಅತ್ಯಾಚಾರ: ಶಿಕ್ಷಕನಿಗೆ ಜೀವಾವಧಿ ಶಿಕ್ಷೆ

ಇತ್ತೀಚಿನ ಸುದ್ದಿ