1540 ರೂಪಾಯಿಗಾಗಿ ಡಿಸಿಗೆ ದೂರು ಕೊಟ್ಟ ವೃದ್ಧೆ: ಅಧಿಕಾರಿಗಳಿಂದ ಕೊನೆಗೂ ಸಿಕ್ತು ಅನ್ನಭಾಗ್ಯ ನಗದು - Mahanayaka

1540 ರೂಪಾಯಿಗಾಗಿ ಡಿಸಿಗೆ ದೂರು ಕೊಟ್ಟ ವೃದ್ಧೆ: ಅಧಿಕಾರಿಗಳಿಂದ ಕೊನೆಗೂ ಸಿಕ್ತು ಅನ್ನಭಾಗ್ಯ ನಗದು

chamarajanagara
25/08/2023


Provided by

ಚಾಮರಾಜನಗರ: ವೃದ್ಧಾಪ್ಯ ವೇತನ ಹಾಗೂ ಅನ್ನಭಾಗ್ಯದ ಹಣ ಕೈ ಸೇರದ ವೃದ್ಧೆಯೊಬ್ಬರು ಡಿಸಿಗೆ ದೂರು ಕೊಟ್ಟು ತದನಂತರ ತನ್ನ ಹಣವನ್ನು ತಾನು ಪಡೆದ ಪ್ರಸಂಗ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ನಡೆದಿದೆ.

ಚಾಮರಾಜನಗರ ತಾಲೂಕಿನ ಕಿಲಗೆರೆ ಗ್ರಾಮದ ಚೆನ್ನಬಸಮ್ಮ ಎಂಬವರು ದೂರು ಕೊಟ್ಟು ತಮ್ಮ ಹಣ ಪಡೆದ ವೃದ್ಧೆ. ತೆರಕಣಾಂಬಿ ಗ್ರಾಹಕ ಸೇವಾಕೇಂದ್ರದಲ್ಲಿ ತನಗರಿವಿಲ್ಲದೇ ವೃದ್ಧಾಪ್ಯ ವೇತನ 1200₹, ಹಾಗೂ ಅನ್ನಭಾಗ್ಯದ ನಗದು 340₹ ಡ್ರಾ ಆಗಿದೆ ಆದರೆ ಅದನ್ನು ತಾನು ಪಡೆದಿಲ್ಲ, ತನಗೆ ನ್ಯಾಯ ದೊರಕಿಸಿಕೊಡಿ ಎಂದು ಚಾಮರಾಜನಗರ ಡಿಸಿ ಶಿಲ್ಪಾನಾಗ್ ಅವರಿಗೆ ಕಳೆದ 21 ರಂದು ದೂರು ಕೊಟ್ಟಿದ್ದರು.

ಡಿಸಿ ಚಾಮರಾಜನಗರ ತಹಶಿಲ್ದಾರ್ ಬಸವರಾಜು ಅವರಿಗೆ ವಿಚಾರಣೆ ನಡೆಸುವಂತೆ ಸೂಚಿಸಿದ್ದರು. ತಹಶಿಲ್ದಾರ್ ಬಸವರಾಜು ಅವರು ಗ್ರಾಹಕ ಸೇವಾ ಕೇಂದ್ರದ ಪ್ರತಿನಿಧಿ, ಫಲಾನುಭವಿ ಚೆನ್ನಬಸಮ್ಮ ಇಬ್ಬರನ್ನೂ ವಿಚಾರಣೆ ನಡೆಸಿ ಡ್ರಾ ಆದ ಹಣ ವೃದ್ಧೆ ಕೈ ಸೇರಿದಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದರಿಂದ ಗ್ರಾಹಕ ಸೇವಾ ಕೇಂದ್ರದ ಪ್ರತಿನಿಧಿಯಿಂದ 1540₹ ನ್ನು ವೃದ್ಧೆಗೆ ಕೊಡಿಸಿದ್ದಾರೆ. ಒಟ್ಟಿನಲ್ಲಿ ತನ್ನ ಹಣಕ್ಕಾಗಿ ದೂರು ಕೊಟ್ಟಿದ್ದಷ್ಟೇ ಅಲ್ಲದೇ ಹಣವನ್ನು ಪಡೆದು ನಗು ಬೀರಿದ್ದಾರೆ.

 

ಇತ್ತೀಚಿನ ಸುದ್ದಿ