ಚಿನ್ನದ ಸರ ಎಗರಿಸಿದ ವೃದ್ಧೆಯನ್ನು ನೋಡಿಕೊಳ್ಳಲು ಬಂದ ಹೋಮ್ ನರ್ಸ್! - Mahanayaka
7:08 PM Saturday 8 - November 2025

ಚಿನ್ನದ ಸರ ಎಗರಿಸಿದ ವೃದ್ಧೆಯನ್ನು ನೋಡಿಕೊಳ್ಳಲು ಬಂದ ಹೋಮ್ ನರ್ಸ್!

home nurse
25/11/2022

ವಯೋವೃದ್ಧರೊಬ್ಬರ ನೋಡಿಕೊಳ್ಳಲು ನೇಮಿಸಿದ್ದ ಹೋಮ್ ನರ್ಸ್ ವೋರ್ವಳು, ವೃದ್ಧೆಯ ಕುತ್ತಿಗೆಯಲ್ಲಿದ್ದ 1.45 ಲಕ್ಷ ಮೌಲ್ಯದ ಚಿನ್ನದ ಸರ ಕಳವು ಮಾಡಿಕೊಂಡು ಪರಾರಿಯಾದ ಘಟನೆ ಉಡುಪಿ ತಾಲೂಕಿನ ಆತ್ರಾಡಿ ಗ್ರಾಮದ ಮದಗ ಎಂಬಲ್ಲಿ ನಡೆದಿದೆ.

ಮದಗದ ಚೆನ್ನಿಬೆಟ್ಟು ನಿವಾಸಿ ವಸಂತ ಶೆಟ್ಟಿ ಅವರು ತಮ್ಮ 98 ವರ್ಷದ ತಾಯಿ ಸರಸ್ವತಿ ಅವರ ಆರೈಕೆ ಮಾಡಿ ನೋಡಿಕೊಳ್ಳಲು ಉಡುಪಿ ಉಷಾ ಮ್ಯಾರೇಜ್ ಬ್ಯುರೋ & ಜಾಬ್ ಲಿಂಕ್ಸ್ ಏಜೆನ್ಸಿ ಮುಖಾಂತರ ರೇಖಾ ಹೆಬ್ಬಳ್ಳಿ ಎಂಬಾಕೆಯನ್ನು ಹೋಂ ನರ್ಸ್ ಆಗಿ ನೇಮಿಸಿದ್ದರು.

ಅಕ್ಟೋಬರ್ 20 ರಿಂದ ರೇಖಾ ಹೆಬ್ಬಳ್ಳಿ, ಸರಸ್ವತಿ ಅವರ ಆರೈಕೆ ಮಾಡಿ ನೋಡಿಕೊಂಡಿದ್ದರು. ನ.21 ರಂದು ಸಂಜೆ ವೇಳೆ ರೇಖಾ ಹೆಬ್ಬಳ್ಳಿ ಯಾರಿಗೂ ಹೇಳದೇ ಮನೆಯಿಂದ ಹೋಗಿದ್ದಳು.

ಬಳಿಕ ವಸಂತ ಶೆಟ್ಟಿ ಅವರು ತಾಯಿಯ ಬಳಿ ಹೋಗಿ ನೋಡಿದಾಗ ಅವರ ಕುತ್ತಿಗೆಯಲ್ಲಿದ್ದ 1.45, ಲಕ್ಷ ರೂ. ಮೌಲ್ಯದ ಚಿನ್ನದ ಚೈನ್ ಕಂಡು ಬಂದಿಲ್ಲ.

ಈ ಬಗ್ಗೆ ರೇಖಾಳಿಗೆ ಫೋನ್ ಮಾಡಿದಾಗ ಆಕೆಯು ಫೋನ್ ಸ್ವೀಕರಿಸುತ್ತಿರಲಿಲ್ಲ. ತಾಯಿ ಚೈನ್ ಅನ್ನು ರೇಖಾ ಅವರೇ ಕಳವು ಮಾಡಿಕೊಂಡು ಹೋಗಿರುವ ಸಂಶಯ ಇದೆ ಎಂದು ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ