ಒಂದೇ ಗ್ರಾಮದಲ್ಲಿ 50ರಿಂದ 60 ಜನರ ಸಾವು | ಇಡೀ ಗ್ರಾಮಸ್ಥರು ಆತಂಕದಲ್ಲಿ! - Mahanayaka
6:08 PM Wednesday 10 - December 2025

ಒಂದೇ ಗ್ರಾಮದಲ್ಲಿ 50ರಿಂದ 60 ಜನರ ಸಾವು | ಇಡೀ ಗ್ರಾಮಸ್ಥರು ಆತಂಕದಲ್ಲಿ!

narendra villege
17/05/2021

ಧಾರವಾಡ: ಕಳೆದ 15 ದಿನಗಳಲ್ಲಿ ಒಂದೇ ಗ್ರಾಮದ 50ರಿಂದ 60 ಜನರು ಒಬ್ಬರ ಹಿಂದೊಬ್ಬರಂತೆ  ವಿವಿಧ ಅನಾರೋಗ್ಯಗಳಿಂದ ಸಾವನ್ನಪ್ಪಿರುವ ಘಟನೆ ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ ನಡೆದಿದ್ದು, ಇದರಿಂದಾಗಿ ಗ್ರಾಮದ ಜನರು ಆತಂಕ್ಕೀಡಾಗಿದ್ದು, ದೇವರ ಮೊರೆ ಹೋಗಿದ್ದಾರೆ.

ಗ್ರಾಮದಲ್ಲಿ ಒಟ್ಟು 32 ಜನರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಈ ಪೈಕಿ ನಾಲ್ವರು ಕೊರೊನಾಕ್ಕೆ ಬಲಿಯಾಗಿದ್ದರು. ಉಳಿದವರು ಹೃದಯಾಘಾತ ಹಾಗೂ ಇನ್ನಿತರ  ಕಾಯಿಲೆಗಳಿಂದ ಮೃತಪಟ್ಟಿದ್ದಾರೆ.

ಒಂದೇ ದಿನದಲ್ಲಿ 3-4 ಜನರು ಸಾವನ್ನಪ್ಪುತ್ತಿರುವುದರಿಂದ ಗ್ರಾಮಸ್ಥರು ಕಂಗಾಲಾಗಿದ್ದಾರೆ. ಗ್ರಾಮಕ್ಕೆ ಆವರಿಸಿರುವ ಸಂಕಷ್ಟ ಕಳೆಯ ಬೇಕು ಎಂದು ಗ್ರಾಮಸ್ಥರು ದೇವರ ಹೆಸರಿನಲ್ಲಿ ಮಂಗಳವಾರ ಮತ್ತು ಶುಕ್ರವಾರದಂದು ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಉಳಿಯಲು ನಿರ್ಧರಿಸಿದ್ದಾರೆ. ಇದರ ಜೊತೆಗೆ ಕೊರೊನಾ ಹೋಗಲಾಡಿಸಲು ಬೇವಿನ ಸೊಪ್ಪು, ಲವಂಗ ಮಿಶ್ರಿತ ಹೊಗೆ ಹಾಕುತ್ತಿದ್ದಾರೆ ಎಂದು ವರದಿಯಾಗಿದೆ.

ಇತ್ತೀಚಿನ ಸುದ್ದಿ