ಒಂದೇ ಏಟಿಗೆ ಮಡಕೆ ಒಡೆದ ಮಂಗಳೂರು ಕಮಿಷನರ್ ಎನ್.ಶಶಿಕುಮಾರ್ - Mahanayaka

ಒಂದೇ ಏಟಿಗೆ ಮಡಕೆ ಒಡೆದ ಮಂಗಳೂರು ಕಮಿಷನರ್ ಎನ್.ಶಶಿಕುಮಾರ್

shashikumar
21/08/2022


Provided by

ಮಂಗಳೂರು: ಪಾಂಡೇಶ್ವರ ಮೈದಾನದ ರೊಸಾರಿಯೊ ಮೈದಾನದಲ್ಲಿ ಸ್ಥಳೀಯರು ಆಯೋಜಿಸಿದ್ದ ಅಕ್ವಾ ಫೆಸ್ಟ್‌ ನಲ್ಲಿ ಮಂಗಳೂರು ಕಮಿಷನರ್ ಎನ್.ಶಶಿಕುಮಾರ್ ಅವರು ಭಾಗವಹಿಸಿ ಒಂದೇ ಏಟಿಗೆ ಮಡಕೆಯನ್ನು ಕೋಲಿನಿಂದ ಒಡೆದು ಅಚ್ಚರಿಗೊಳಿಸಿದ್ರು.

ರೊಸಾರಿಯೋ ಮೈದಾನದಲ್ಲಿ ಸುಮಾರು 100ಕ್ಕೂ ಅಧಿಕ ಸ್ಥಳೀಯರು ಸೇರಿಕೊಂಡು ಈ ಅಕ್ವಾ ಫೆಸ್ಟ್ ಎಂಬ ಮಡಕೆ ಒಡೆಯುವ ಕಾರ್ಯಕ್ರಮ ಆಯೋಜಿಸಿದ್ದರು.

ಸಂಜೆ ಹೊತ್ತು ಅದೇ ದಾರಿಯಲ್ಲಿ ಮನೆಯ ಮಕ್ಕಳ ಜತೆ ವಾಕಿಂಗ್‌ ಗೆ ತೆರಳಿದ್ದ ಪೊಲೀಸ್ ಕಮಿಷನರ್ ಶಶಿಕುಮಾರ್ ಆಟವನ್ನು ವೀಕ್ಷಿಸುತ್ತಿದ್ದಾಗ ಸ್ಥಳೀಯರು ಅವರನ್ನು ಮಡಕೆ ಒಡೆಯಲು ಆಹ್ವಾನಿಸಿದರು.

ಈ ಆಹ್ವಾನವನ್ನು ಸ್ವೀಕರಿಸಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಕೈಯ್ಯಲ್ಲಿ ಕೋಲು ಹಿಡಿದು ಒಂದಿಷ್ಟು ಹೊತ್ತು ಆ ಮಡಕೆಯನ್ನು ತಲುಪುವ ಬಗ್ಗೆ ಲೆಕ್ಕಾಚಾರ ಹಾಕಿಕೊಂಡು ಅದರತ್ತ ಸಾಗಿ ಒಂದೇ ಹೊಡೆತಕ್ಕೆ ನೀರಿದ್ದ ಮಡಕೆಯನ್ನು ಒಡೆದರು. ಅಲ್ಲಿ ಸೇರಿದ್ದವರು ಕರತಾಡನದ ಮೂಲಕ ಪೊಲೀಸ್ ಆಯುಕ್ತರನ್ನು ಅಭಿನಂದಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ