ಒಂದೇ ಯುವತಿಯನ್ನು ಪ್ರೀತಿಸಿದ ಸಹೋದರರು | ವಿಷಯ ತಿಳಿದಾಗ  ನೊಂದ ಸಹೋದರರಿಂದ ಆತ್ಮಹತ್ಯೆ - Mahanayaka
2:47 PM Wednesday 15 - October 2025

ಒಂದೇ ಯುವತಿಯನ್ನು ಪ್ರೀತಿಸಿದ ಸಹೋದರರು | ವಿಷಯ ತಿಳಿದಾಗ  ನೊಂದ ಸಹೋದರರಿಂದ ಆತ್ಮಹತ್ಯೆ

11/03/2021

ಜೈಪುರ: ಒಂದೇ ಯುವತಿಯನ್ನು  ಪ್ರೀತಿಸಿದ ಸಹೋದರರ ಜೀವನ ದುರಂತ ಅಂತ್ಯವಾಗಿದ್ದು,  ರಾಜಸ್ಥಾನದ ಬಂಡಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ದುಬ್ಲಾನಾ ಪೊಲೀಸ್ ಠಾಣೆ ವ್ಯಾಪ್ತಿಯ ಕೇಶವ್ ಪುರ ಗ್ರಾಮ ನಿವಾಸಿಗಳಾಗಿರುವ ಯುವಕರು ಆತ್ಮಹತ್ಯೆಗೆ ಶರಣಾಗಿದ್ದಾರೆ.


Provided by

23 ವರ್ಷ ವಯಸ್ಸಿನ  ದೇವ್ ರಾಜ್ ಗುರ್ಜರ್  ಹಾಗೂ ಮಹೇಂದ್ರ ಗುರ್ಜರ್ ಆತ್ಮಹತ್ಯೆಗೆ ಶರಣಾದ ಯುವಕರಾಗಿದ್ದಾರೆ. ಇವರಿಬ್ಬರು ಕೂಡ ಒಂದೇ ಯುವತಿಯರನ್ನು ಪ್ರೀತಿಸುತ್ತಿದ್ದರು. ಆದರೆ ಇದು ಇಬ್ಬರಿಗೂ ತಿಳಿದಿರಲಿಲ್ಲ. ಇಬ್ಬರು ಉತ್ತಮ ಸಂಬಂಧವನ್ನು ಹೊಂದಿದ್ದರೂ ಕೂಡ ಈ ವಿಚಾರವನ್ನು ಪರಸ್ಪರ ಚರ್ಚೆ ಮಾಡಿರಲಿಲ್ಲ. ಆದರೆ ಒಂದು ದಿನ ಹೀಗೆ ಮಾತನಾಡುತ್ತಿರುವಾಗ ಪ್ರೀತಿಯ ವಿಚಾರದ ಬಗ್ಗೆ ಚರ್ಚೆ ಮಾಡಿದ್ದಾರೆ. ಈ ವೇಳೆ ಇಬ್ಬರು ಕೂಡ ಒಂದೇ ಯುವತಿಯನ್ನು ಪ್ರೀತಿಸುತ್ತಿರುವುದು ಅವರಿಗೆ ತಿಳಿದಿದೆ.

ಈ ವೇಳೆ ಇಬ್ಬರು ಸಹೋದರರು ಕೂಡ ಆತ್ಮಹತ್ಯೆಗೆ ನಿರ್ಧರಿಸಿದ್ದಾರೆ.  ಆತ್ಮಹತ್ಯೆಗೂ ಮೊದಲು ತಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದು, ತಮ್ಮ ಸಾವಿಗೆ ತಾವೇ ಕಾರಣ. ನಮಗೆ ಯಾರೂ ಒತ್ತಡವೂ ಹಾಕಿಲ್ಲ. ನಮಗೆ ಬದುಕಲು ಇಷ್ಟವಿಲ್ಲ ಎಂದು ಹೇಳಿದ್ದಾರೆ.

ತಮ್ಮನ್ನು ಕ್ಷಮಿಸಿ ಎಂದು ಕುಟುಂಬಸ್ಥರಿಗೆ ಹೇಳಿರುವ ಈ ಸಹೋದರರು, ರೈಲಿನ ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಆತ್ಮಹತ್ಯೆ ಮಾಡಿಕೊಂಡ ಇಬ್ಬರು ಯುವಕರ ಕೈಯಲ್ಲಿ ಕೂಡ ಯುವತಿಯ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿ