'ಒಂದು ಮಗು ನೀತಿ’ಯನ್ನು ಕೈಬಿಡಬೇಕು | ಯೋಗಿ ಸರ್ಕಾರಕ್ಕೆ ವಿಶ್ವ ಹಿಂದೂ ಪರಿಷತ್ ಮನವಿ! - Mahanayaka
2:38 AM Wednesday 15 - October 2025

‘ಒಂದು ಮಗು ನೀತಿ’ಯನ್ನು ಕೈಬಿಡಬೇಕು | ಯೋಗಿ ಸರ್ಕಾರಕ್ಕೆ ವಿಶ್ವ ಹಿಂದೂ ಪರಿಷತ್ ಮನವಿ!

alok kumar
12/07/2021

ನವದೆಹಲಿ: ಜನಸಂಖ್ಯಾ ನಿಯಂತ್ರಣ ಕರಡು ಮಸೂದೆಯಿಂದ ‘ಒಂದು ಮಗು ನೀತಿ’ಯನ್ನು ಕೈಬಿಡಬೇಕು ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್ ಪಿ) ಉತ್ತರ ಪ್ರದೇಶ ಸರ್ಕಾರದ ವಿವಾದಿತ ಕಾಯ್ದೆಗೆ ಸಲಹೆ ನೀಡಿದೆ.


Provided by

 ಒಂದು ಮಗು ನೀತಿಯು ಜನಸಂಖ್ಯೆಯನ್ನು ಸ್ಥಿರವಾಗಿಸುವುದರ ಜೊತೆಗೆ ರಾಜ್ಯದಲ್ಲಿ ವಿವಿಧ ಸಮುದಾಯಗಳ ನಡುವೆ ಅಸಮತೋಲನಕ್ಕೂ ಕಾರಣವಾಗಬಹುದು ಎಂದೂ ವಿಎಚ್‌ಪಿ ಪ್ರತಿಪಾದಿಸಿದೆ.

ಕರಡು ಮಸೂದೆಯ ಪೀಠಿಕೆಯಂತೆ, ಉದ್ದೇಶಿತ ಕಾಯ್ದೆಯು ಜನಸಂಖ್ಯೆಯಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳುವುದರ ಜೊತೆಗೆ ಎರಡು ಮಕ್ಕಳ ನೀತಿಗೆ ಉತ್ತೇಜನ ನೀಡಲಿದೆ. ಈ ಎರಡೂ ಅಂಶಗಳಿಗೆ ವಿಶ್ವ ಹಿಂದೂ ಪರಿಷತ್‌ ಸಮ್ಮತಿಯಿದೆ ಎಂದು ವಿಎಚ್‌ಪಿಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್‌ ಹೇಳಿದ್ದಾರೆ.

ಸರ್ಕಾರಿ ನೌಕರರು ಮತ್ತು ಇತರರು  ಕುಟುಂಬದಲ್ಲಿ ಒಂದೇ ಮಗು ಹೊಂದಬೇಕು ಎಂದು ಉತ್ತೇಜನ ನೀಡುವ, ಕರಡು ಮಸೂದೆಯ ಸೆಕ್ಷನ್ 5, 6 (2) ಮತ್ತು 7 ಅಂಶಗಳು ಉದ್ದೇಶಕ್ಕೆ ಹೊರತಾಗಿವೆ. ಹೀಗಾಗಿ, ಸೆಕ್ಷನ್‌ 5 ಹಾಗೂ ಪೋಷಕರ ಬದಲಿಗೆ ಮಗುವಿಗೆ ದಂಡನೆ ನೀಡುವ ಅಂಶ ಕೈಬಿಡಬೇಕು ಎಂದು ಅವರು ಹೇಳಿದರು.

ಇತ್ತೀಚಿನ ಸುದ್ದಿ