ಮಲ್ಪೆ ಬೀಚ್ ನಲ್ಲಿ ಒಬ್ಬ ಯುವಕ ನೀರುಪಾಲು, ಮತ್ತೊಬ್ಬ ಅಸ್ವಸ್ಥ! - Mahanayaka
7:09 AM Wednesday 15 - October 2025

ಮಲ್ಪೆ ಬೀಚ್ ನಲ್ಲಿ ಒಬ್ಬ ಯುವಕ ನೀರುಪಾಲು, ಮತ್ತೊಬ್ಬ ಅಸ್ವಸ್ಥ!

malpe beach
04/10/2025

ಮಲ್ಪೆ: ಬೀಚ್ ನಲ್ಲಿ ಆಟವಾಡುತ್ತಿದ್ದ ಯುವಕರ ತಂಡದ ಪೈಕಿ ಒಬ್ಬ ಸಮುದ್ರ ಪಾಲಾಗಿ, ಇನ್ನೊಬ್ಬ ಗಂಭೀರವಾಗಿ ಅಸ್ವಸ್ಥಗೊಂಡಿರುವ ಘಟನೆ  ಮಲ್ಪೆ ಬೀಚ್ ನಲ್ಲಿ ಶುಕ್ರವಾರ ಸಂಜೆ ನಡೆದಿದೆ.


Provided by

ಹಾಸನದ ಮಿಥುನ್(20) ನೀರುಪಾಲಾದ ಯುವಕ ಎಂದು ಗುರುತಿಸಲಾಗಿದೆ. ಶಶಾಂಕ್(22) ಎಂಬಾತ ತೀವ್ರವಾಗಿ ಅಸ್ವಸ್ಥಗೊಂಡಿದ್ದು, ಆತನನ್ನ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಹಾಸನದಿಂದ ಉಡುಪಿಯ ಮಲ್ಪೆ ಬೀಚ್ ಗೆ 7 ಯುವಕರು ಪ್ರವಾಸ ಬಂದಿದ್ದರು. ಸಂಜೆ ವೇಳೆ ಬೀಸುವ ಸಮುದ್ರದ ಅಲೆಯ ನಡುವೆ ಆಟವಾಡುತ್ತಿದ್ದರು. ಈ ವೇಳೆ ವೇಗವಾಗಿ ಬೀಸಿದ ಅಲೆಗೆ ಸಿಲುಕಿ ಯುವಕರು ಸಮುದ್ರಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ.

ಈ ವೇಳೆ ಲೈಫ್ ಗಾರ್ಡ್ ಗಳು ಹಾಗೂ ಸ್ಥಳೀಯರು 6 ಮಂದಿಯನ್ನು ರಕ್ಷಣೆ ಮಾಡಿದ್ದಾರೆ. ಆದರೆ, ಒಬ್ಬ ನೀರುಪಾಲಾಗಿದ್ದು, ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಸ್ಥಳಕ್ಕೆ ಮಲ್ಪೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ