ಫೀಸ್ ಕಟ್ಟದೇ ಆನ್‌ಲೈನ್ ಕ್ಲಾಸಿಗೆ ಬರುವಂತಿಲ್ಲ: ಕಾಲೇಜು ನಿಯಮಗಳ ವಿರುದ್ಧ ಕ್ಯಾಂಪಸ್ ಫ್ರಂಟ್ ವತಿಯಿಂದ ಮನವಿ - Mahanayaka

ಫೀಸ್ ಕಟ್ಟದೇ ಆನ್‌ಲೈನ್ ಕ್ಲಾಸಿಗೆ ಬರುವಂತಿಲ್ಲ: ಕಾಲೇಜು ನಿಯಮಗಳ ವಿರುದ್ಧ ಕ್ಯಾಂಪಸ್ ಫ್ರಂಟ್ ವತಿಯಿಂದ ಮನವಿ

cfi sullia
25/05/2021

ಸುಳ್ಯ: ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟಕ್ಕೊಳಗಾಗಿ ಹಲವು ವಿದ್ಯಾರ್ಥಿಗಳು ಕಾಲೇಜು ಫೀಸು ಪಾವತಿ ಮಾಡಲು ಸಮಯಾವಕಾಶ ನೀಡಲು ಒತ್ತಾಯಿಸಿ ಕ್ಯಾಂಪಸ್ ಫ್ರಂಟ್ ವತಿಯಿಂದ ತಹಶೀಲ್ದಾರ್‌ ರಿಗೆ ಮನವಿ ಸಲ್ಲಿಸಲಾಯಿತು.

ಲಾಕ್‌ ಡೌನ್‌ನಲ್ಲಿ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿ ಪ್ರಾರಂಭಿಸಲಾಗಿದ್ದು, ಆದರೆ ಆರ್ಥಿಕ ಸಂಕಷ್ಟಕ್ಕೆ ಒಳಗಾದ ಹಲವಾರು ವಿದ್ಯಾರ್ಥಿಗಳು ಕಾಲೇಜು ಶುಲ್ಕ ಪಾವತಿ ಮಾಡದಿರುವ ಕಾರಣ ಆನ್‌ಲೈನ್ ತರಗತಿಗೆ ಸೇರಿಸದೆ ವಿದ್ಯಾರ್ಥಿಗಳಿಗೆ ಒತ್ತಡ ಹೇರುತ್ತಿದೆ. ಇದರಿಂದ ಪೋಷಕರು ತಮ್ಮ ಮಕ್ಕಳ ಶೈಕ್ಷಣಿಕ ಭವಿಷ್ಯದ ಬಗ್ಗೆ ಆತಂಕಕ್ಕೊಳಗಾಗಿದ್ದಾರೆ. ಹಾಗಾಗಿ ಇಲ್ಲಿನ ಆಡಳಿತ ವ್ಯವಸ್ಥೆ ಇದರ ಬಗ್ಗೆ ಗಮನಹರಿಸಿ ವಿದ್ಯಾರ್ಥಿಗಳಿಗೆ ಶುಲ್ಕ ಪಾವತಿಗೆ ಹೆಚ್ಚಿನ ಕಾಲಾವಕಾಶ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಪುತ್ತೂರು ಜಿಲ್ಲಾ ಅಧ್ಯಕ್ಷರಾದ ಅನ್ಸಾರ್ ಬೆಳ್ಳಾರೆ, ಜಿಲ್ಲಾ ಸಮಿತಿ ಸದಸ್ಯರಾದ ಸುಹೈಲ್ ಸುಳ್ಯ, ಸುಳ್ಯ ಏರಿಯಾ ಜೊತೆ ಕಾರ್ಯದರ್ಶಿ ಶಮಲ್ ಸುಳ್ಯ ಮತ್ತಿತರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ