ಒಂಟಿ ಮಹಿಳೆಯನ್ನು ಹಿಂಬಾಲಿಸಿದ ವ್ಯಕ್ತಿಗೆ ಗಂಡ-ಹೆಂಡತಿಯಿಂದ ರಸ್ತೆಯಲ್ಲಿಯೇ ಹಲ್ಲೆ - Mahanayaka
10:33 PM Wednesday 27 - August 2025

ಒಂಟಿ ಮಹಿಳೆಯನ್ನು ಹಿಂಬಾಲಿಸಿದ ವ್ಯಕ್ತಿಗೆ ಗಂಡ-ಹೆಂಡತಿಯಿಂದ ರಸ್ತೆಯಲ್ಲಿಯೇ ಹಲ್ಲೆ

belagavi news
04/07/2021


Provided by

ಬೆಳಗಾವಿ: ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಮಹಿಳೆಯನ್ನು ಹಿಂಬಾಲಿಸಿದ ವ್ಯಕ್ತಿಗೆ ಪತಿ-ಪತ್ನಿ ಸೇರಿ ಧರ್ಮದೇಟು ನೀಡಿರುವ ಘಟನೆ ನಗರದ ಎಸ್ ಪಿ ಕಚೇರಿ ಬಳಿಯಲ್ಲಿ ನಡೆದಿದೆ.

 

ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಗೋಪಾಲ ಗುರನ್ನವರ ಎಂಬಾತ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡಿ ಬರುತ್ತಿದ್ದ ಮಹಿಳೆಯನ್ನು ಹಿಂಬಾಲಿಸಿಕೊಂಡು ಬಂದಿದ್ದಾನೆ ಎಂದು ಆರೋಪಿಸಲಾಗಿದೆ.

 

ಆರೋಪಿ ಮಹಿಳೆಯನ್ನು ಹಿಂಬಾಲಿಸಿಕೊಂಡು ಬರುತ್ತಿದ್ದ ವೇಳೆ ಮಹಿಳೆಯ ಪತಿ ಹಾಗೂ ಸಾರ್ವಜನಿಕ ಸ್ಥಳದಲ್ಲಿಯೇ ವ್ಯಕ್ತಿಯನ್ನು ಥಳಿಸಿದ್ದಾರೆ ಎಂದು ವರದಿಯಾಗಿದೆ.

ಇತ್ತೀಚಿನ ಸುದ್ದಿ