ಮತ್ತೆ ಆಪರೇಷನ್ ಸಿಂಧೂರ ಆರಂಭ: ಕೆಣಕಿದ ಪಾಕ್ ಗೆ ತಕ್ಕ ಉತ್ತರ ನೀಡಲು ಸಿದ್ಧ - Mahanayaka

ಮತ್ತೆ ಆಪರೇಷನ್ ಸಿಂಧೂರ ಆರಂಭ: ಕೆಣಕಿದ ಪಾಕ್ ಗೆ ತಕ್ಕ ಉತ್ತರ ನೀಡಲು ಸಿದ್ಧ

operation sindoor
11/05/2025


Provided by

ನವದೆಹಲಿ: ಆಪರೇಷನ್ ಸಿಂಧೂರ್ ಮುಂದುವರೆದಿದೆ, ಸರಿಯಾದ ಸಮಯದಲ್ಲಿ ಸೂಕ್ತ ಮಾಹಿತಿಗಳನ್ನು ಹಂಚಿಕೊಳ್ಳಲಾಗುವುದು ಎಂದು ಭಾರತೀಯ ವಾಯುಪಡೆ(IAF) ಮಾಹಿತಿ ನೀಡಿದೆ.

ಭಾರತ—ಪಾಕಿಸ್ತಾನ  ಅಘೋಷಿತ ಯುದ್ಧಕ್ಕೆ ಶನಿವಾರ ಸಂಜೆಯಿಂದ ಕದನ ವಿರಾಮ  ಘೋಷಿಸಿತ್ತು ಆದರೆ ಕದನ ವಿರಾಮ ಘೋಷಿಸಿದ ಬೆನ್ನಲ್ಲೇ ಪಾಕಿಸ್ತಾನ ಭಾರತದ ಹಲವೆಡೆ ಕದನ ವಿರಾಮ ಉಲ್ಲಂಘಿಸಿ ದಾಳಿ ನಡೆಸುತ್ತಲೇ ಇತ್ತು.

ಇದೀಗ ಐಎಎಫ್​ ಎಕ್ಸ್ ​ನಲ್ಲಿ ಪೋಸ್ಟ್​ ಮಾಡಿದ್ದು, ಆಪರೇಷನ್ ಸಿಂಧೂರ್​ ಇನ್ನೂ ಮುಗಿದಿಲ್ಲ ಮುಂದುವರೆದಿದೆ ಎಂದು ಹೇಳಿದ್ದು, ಇದೀಗ ಭಾರತವನ್ನು ಅನಗತ್ಯವಾಗಿ ಕೆಣಕಿದ ಪಾಕಿಸ್ತಾನಕ್ಕೆ ಭಾರತ ಮತ್ತೆ ಸರಿಯಾದ ಏಟು ನೀಡಲಿದೆ ಎನ್ನಲಾಗುತ್ತಿದೆ.

ಆಪರೇಷನ್ ಸಿಂಧೂರ್ ರಾಷ್ಟ್ರೀಯ ಉದ್ದೇಶಗಳಿಗೆ ಅನುಗುಣವಾಗಿ ಯೋಜಿತ ಮತ್ತು ರಹಸ್ಯ ರೀತಿಯಲ್ಲಿ ನಡೆಸಲಾಗಿದೆ. ಅಭಿಯಾನ ಇನ್ನೂ ನಡೆಯುತ್ತಿರುವುದರಿಂದ, ವಿವರವಾದ ಮಾಹಿತಿಯನ್ನು ಸೂಕ್ತ ಸಮಯದಲ್ಲಿ ಹಂಚಿಕೊಳ್ಳಲಾಗುವುದು. ಊಹಾಪೋಹಗಳಿಗೆ ಕಿವಿಗೊಡಬೇಡಿ ಮತ್ತು ಅಸ್ಪಷ್ಟ ಮಾಹಿತಿಯನ್ನು ಪ್ರಸಾರ ಮಾಡುವುದನ್ನು ತಪ್ಪಿಸಿ ಎಂದು ವಾಯುಪಡೆ ಮನವಿ ಮಾಡಿಕೊಂಡಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ