ಬಿಜೆಪಿಯ ಹಿಂದೂತ್ವ ಮನೆಗಳನ್ನು ಹೊತ್ತಿಸುತ್ತದೆ : ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ ಹೇಳಿಕೆ

ಬಿಜೆಪಿ ಮತ್ತು ನಮ್ಮ ಹಿಂದೂತ್ವದ ನಡುವೆ ಬಹಳಷ್ಟು ವ್ಯತ್ಯಾಸವಿದೆ. ತಮ್ಮ ಹಿಂದೂತ್ವ ಜನರ ಮನೆಗಳಲ್ಲಿ ಒಲೆಗಳನ್ನು ಹೊತ್ತಿಸಿದರೆ, ಬಿಜೆಪಿಯ ಹಿಂದೂತ್ವ ಮನೆಗಳನ್ನು ಹೊತ್ತಿಸುತ್ತದೆ ಎಂದು ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಸಾರ್ವಜನಿಕ ಸಭೆಯನ್ನುದ್ಧೇಶಿಸಿ ಮಾತನಾಡಿದ ಉದ್ಧವ್ ಠಾಕ್ರೆ , ಪ್ರಧಾನಿಯು ನ್ಯಾಯಾಂಗದ ಮೇಲೆ ಕೂಡ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿದರಲ್ಲದೇ ಕಾನೂನು ಎಲ್ಲರಿಗೂ ಸಮಾನವಾಗಿರುವಂತೆ ಖಾತ್ರಿಪಡಿಸಲು ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದರು.
“ಮೋದಿ ಸರ್ಕಾರವು ನಮ್ಮ ಪಕ್ಷದ ವಿರುದ್ಧ ಚುನಾವಣಾ ಆಯೋಗವನ್ನೂ ಬಳಸಿದೆ. ನಮ್ಮ ಬಿಲ್ಲು ಬಾಣವನ್ನು ಸೆಳೆಯಲಾಯಿತು, ನೀವು (ಪ್ರಧಾನಿ) ನಮ್ಮ ಪಕ್ಷ, ಚಿಹ್ನೆ ಮತ್ತು ನನ್ನ ಜನರನ್ನೂ ಸೆಳೆದಿರಿ, ಆದರೂ ನೀವು ಉದ್ಧವ್ ಠಾಕ್ರೆಗೆ ಭಯ ಪಡುತ್ತೀರಲ್ಲವೇ?” ಎಂದು ಅವರು ಪ್ರಶ್ನಿಸಿದರು.
ಮೋದೀಜಿಯ ನಾಟಕ ಜೂನ್ 4ರ ತನಕ ನಡೆಯಲಿದೆ, ಜೂನ್ 4ರ ನಂತರ ಅವರು ಪ್ರಧಾನಿ ನರೇಂದ್ರ ಮೋದಿ ಎಂದು ಕರೆಸಿಕೊಳ್ಳುವುದಿಲ್ಲ, ಕೇವಲ ನರೇಂದ್ರ ಮೋದಿ ಆಗುತ್ತಾರೆ” ಎಂದು ಉದ್ಧವ್ ಹೇಳಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth