ಲೋಕಸಭಾ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸುವಾಗ ‘ಜೈ ಫೆಲೆಸ್ತೀನ್’ ಎಂದು ಘೋಷಣೆ ಕೂಗಿದ ಓವೈಸಿ

ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಲೋಕಸಭೆಯ ಸದಸ್ಯರಾಗಿ “ಜೈ ಫೆಲೆಸ್ತಿನ್” ಎಂಬ ಪದಗಳೊಂದಿಗೆ ಪ್ರಮಾಣ ವಚನ ಸ್ವೀಕರಿಸಿದರು. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಓವೈಸಿ ಅವರು ಬಿಜೆಪಿಯ ಮಾಧವಿ ಲತಾ ಕೊಂಪೆಲ್ಲಾ ಅವರನ್ನು 3,38,087 ಮತಗಳ ಅಂತರದಿಂದ ಸೋಲಿಸಿದ್ದರು.
ಲೋಕಸಭೆಯ 18 ನೇ ಅಧಿವೇಶನದಲ್ಲಿ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸುವಾಗ ಓವೈಸಿ “ಜೈ ಭೀಮ್, ಜೈ ಮೀಮ್, ಜೈ ತೆಲಂಗಾಣ, ಜೈ ಫೆಲೆಸ್ತೀನ್” ಎಂಬ ಪದಗಳೊಂದಿಗೆ ತಮ್ಮ ಪ್ರಮಾಣವಚನವನ್ನು ಕೊನೆಗೊಳಿಸಿದರು. ತಮ್ಮ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಓವೈಸಿ, “ಐದನೇ ಬಾರಿಗೆ ಲೋಕಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ್ದೇನೆ. ಇನ್ಶಾ ಅಲ್ಲಾಹ್, ನಾನು ಭಾರತದ ಅಂಚಿನಲ್ಲಿರುವವರ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ಎತ್ತುವುದನ್ನು ಮುಂದುವರಿಸುತ್ತೇನೆ” ಎಂದಿದ್ದಾರೆ.
ಎಎನ್ಐ ಜೊತೆ ಮಾತನಾಡಿದ ಓವೈಸಿ, “ಎಲ್ಲರೂ ಬಹಳಷ್ಟು ವಿಷಯಗಳನ್ನು ಹೇಳುತ್ತಿದ್ದಾರೆ. ನಾನು “ಜೈ ಭೀಮ್, ಜೈ ಮೀಮ್, ಜೈ ತೆಲಂಗಾಣ, ಜೈ ಫೆಲೆಸ್ತೀನ್” ಎಂದು ಹೇಳಿದೆ. ಇದು ಹೇಗೆ ವಿರುದ್ಧವಾಗಿದೆ..? ಸಂವಿಧಾನದಲ್ಲಿನ ನಿಬಂಧನೆಯನ್ನು ತೋರಿಸುತ್ತದೆ” ಎಂದು ಅವರು ಹೇಳಿದರು. ‘ಜೈ ಫೆಲೆಸ್ತೀನ್’ ಎಂದು ಹೇಳಲು ಕಾರಣವೇನು ಎಂದು ಕೇಳಿದಾಗ, “ವಹಾ ಕಿ ಆವಾಮ್ ಮಹ್ರೂಮ್ ಹೈ (ಅಲ್ಲಿನ ಜನರು ನಿರ್ಗತಿಕರು) ಎಂದಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth