ಓವೈಸಿ ಮನೆ ಧ್ವಂಸ ಪ್ರಕರಣ: ಐವರು ಹಿಂದೂ ಸೇನೆ ಕಾರ್ಯಕರ್ತರು ಅರೆಸ್ಟ್ - Mahanayaka
11:29 PM Wednesday 15 - October 2025

ಓವೈಸಿ ಮನೆ ಧ್ವಂಸ ಪ್ರಕರಣ: ಐವರು ಹಿಂದೂ ಸೇನೆ ಕಾರ್ಯಕರ್ತರು ಅರೆಸ್ಟ್

owaisi
22/09/2021

ನವದೆಹಲಿ: ಅಖಿಲ ಭಾರತ ಮಜ್ಲಿಸ್ ಇ ಇತ್ತೇಹಾದುಲ್ ಮುಸ್ಲಿಮೀನ್(ಎಐಎಂಐಎಂ) ನಾಯಕ, ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಮನೆ ಮೇಲೆ ದಾಳಿ ನಡೆಸಿದ ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು 5 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.


Provided by

ದೆಹಲಿಯ ಅಶೋಕ ರಸ್ತೆಯಲ್ಲಿರುವ ಅಸಾದುದ್ದೀನ್ ಓವೈಸಿ ಅವರಿಗೆ ಸೇರಿದ ಮನೆಗೆ ನುಗ್ಗಿದ ದುಷ್ಕರ್ಮಿಗಳು ಮನೆಯ ವಸ್ತುಗಳನ್ನು ಧ್ವಂಸಗೊಳಿಸಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಹಿಂದೂ ಸೇನೆ ಎಂಬ ಸಂಘಟನೆಯ ಕಾರ್ಯಕರ್ತರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಬಂಧಿತರೆಲ್ಲರೂ ಈಶಾನ್ಯ ದೆಹಲಿ ಮಂಡೋಲಿ ಪ್ರದೇಶದ ನಿವಾಸಿಗಳಾಗಿದ್ದಾರೆ ಎಂದು ನವದೆಹಲಿ ಜಿಲ್ಲಾ ಡಿಸಿಪಿ ದೀಪಕ್ ಯಾದವ್ ದೃಢಪಡಿಸಿದ್ದು, ಬಂಧಿರನ್ನು ಪೊಲೀಸರು ತಮ್ಮ ಶೈಲಿಯಲ್ಲಿ ವಿಚಾರಣೆ ನಡೆಸುತ್ತಿದ್ದು, ನ್ಯಾಯಾಲಯಕ್ಕೆ ಒಪ್ಪಿಸಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.

ಘಟನೆಯ ಬಗ್ಗೆ ಟ್ವೀಟ್ ಮಾಡಿರುವ ಓವೈಸಿ, ಸಂಸದರ ಮನೆಯೇ ಸುರಕ್ಷಿತವಲ್ಲದಿದ್ದರೆ, ಅಮಿತ್ ಶಾ ಯಾವ ರೀತಿಯ ಸಂದೇಶವನ್ನು ರವಾನಿಸುತ್ತಿದ್ದಾರೆ? ಎಂದು ಗೃಹ ಸಚಿವ ಅಮಿತ್ ಶಾ ಅವರನ್ನು ಟ್ಯಾಗ್ ಮಾಡಿ ಚುಚ್ಚಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HpGUvPNd4TWBQJG8MXH5on

ಇನ್ನಷ್ಟು ಸುದ್ದಿಗಳು…

ಯುವತಿಯೊಂದಿಗಿನ ಫೋಟೋ ಲೀಕ್ ಆಗುವ ಭೀತಿಯಿಂದ ಸ್ವಾಮೀಜಿ ಆತ್ಮಹತ್ಯೆ? | ಡೆತ್ ನೋಟ್ ನಲ್ಲಿ ಏನಿತ್ತು ಗೊತ್ತಾ?

ಕೊಪ್ಪಳದಲ್ಲಿ ಅಸ್ಪೃಶ್ಯತಾ ಆಚರಣೆ ಪ್ರಕರಣ: ಐವರು ಕಿಡಿಗೇಡಿಗಳ ಅರೆಸ್ಟ್

ವಿದ್ಯಾರ್ಥಿಗಳ ವೃತ್ತಿಪರ ಕೋರ್ಸ್ ಶುಲ್ಕ ಮನ್ನಾ | ತಮಿಳುನಾಡು ಸಿಎಂ ಸ್ಟಾಲಿನ್ ಘೋಷಣೆ

ಬೆಂಗಳೂರಿನ ಅಪಾರ್ಟ್​ಮೆಂಟ್ ನಲ್ಲಿ ಅಗ್ನಿ ಅವಘಡ: ತಾಯಿ, ಮಗಳು ಸಜೀವ ದಹನ

ವಿಷ ಸೇವಿಸಿದ್ದ ಸಾಮೂಹಿಕ ಅತ್ಯಾಚಾರದ ಸಂತ್ರಸ್ತೆ ಬಾಲಕಿ ಚಿಕಿತ್ಸೆ ಫಲಿಸದೇ ಸಾವು

ಕೊಪ್ಪಳ ಘಟನೆ: ಬಿಜೆಪಿ, ಹಿಂದೂತ್ವ ಸಂಘಟನೆಗಳಿಗೆ ನಾಚಿಕೆಗೇಡು! | ಬಿಜೆಪಿ ಮನುವಾದಿ ಎಂದ ಕಾಂಗ್ರೆಸ್

ವಿಡಿಯೋದಲ್ಲಿರುವುದು ನಾನಲ್ಲ, ಅದೊಂದು ನಕಲಿ ವಿಡಿಯೋ: ಸದಾನಂದ ಗೌಡ ಸ್ಪಷ್ಟನೆ

ಇತ್ತೀಚಿನ ಸುದ್ದಿ