ಆಕ್ಸಿಜನ್ ಸಿಗದೇ 4 ರೋಗಿಗಳು ಸಾವು |  ಸಾವು ಬದುಕಿನ ನಡುವೆ 32 ರೋಗಿಗಳ ಒದ್ದಾಟ - Mahanayaka
6:03 PM Wednesday 20 - August 2025

ಆಕ್ಸಿಜನ್ ಸಿಗದೇ 4 ರೋಗಿಗಳು ಸಾವು |  ಸಾವು ಬದುಕಿನ ನಡುವೆ 32 ರೋಗಿಗಳ ಒದ್ದಾಟ

kalaburgi
04/05/2021


Provided by

ಕಲಬುರ್ಗಿ:  ನಿನ್ನೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೇ 24 ರೋಗಿಗಳು ಸಾವನ್ನಪ್ಪಿರುವ ಬೆನ್ನಲ್ಲೇ ಇದೀಗ ಕಲಬುರ್ಗಿ ಜಿಲ್ಲೆಯಲ್ಲಿ ಆಕ್ಸಿಜನ್ ದೊರೆಯದೇ ನಾಲ್ವರು ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ.

ಕಲಬುರ್ಗಿ ಜಿಲ್ಲೆಯಲ್ಲಿ ಕಳೆದ 10 ದಿನಗಳಿಂದ ಆಕ್ಸಿಜನ್ ಕೊರತೆ ಉಂಟಾಗಿದೆ ಎಂದು ಹೇಳಲಾಗಿದೆ. ಇನ್ನೂ 32 ಸೋಂಕಿತರು ಆಕ್ಸಿಜನ್ ದೊರೆಯದೇ ಪರದಾಡುತ್ತಿದ್ದಾರೆ ಎಂದು ವರದಿಯಾಗಿದೆ.

ಇಂದು ಮುಂಜಾನೆ 4 ಗಂಟೆಗೆ ಆಕ್ಸಿಜನ್ ಖಾಲಿಯಾಗಿದೆ ಎಂದು ಹೇಳಲಾಗಿದೆ. ನಾಲ್ವರು ಸಾವನ್ನಪ್ಪಿದ್ದರೆ, 32ಕ್ಕೂ ಅಧಿಕ ಕೊರೊನಾ ಸೋಂಕಿತರು ಆಕ್ಸಿಜನ್ ದೊರೆಯದೇ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.

 

ಇತ್ತೀಚಿನ ಸುದ್ದಿ